ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಎರಡನೇ ಸ್ಥಾನದಲ್ಲಿರುವ ನೀರಜ್ ಚೋಪ್ರಾ ಫೈನಲ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಬೆಳ್ಳಿ ಪದಕ ಗಳಿಸಿದ್ದಾರೆ.
ಮೊದಲ ಜಾವೆಲಿನ್ ಎಸೆತ ಫೌಲ್ ಆಗಿದೆ. ಎರಡನೇ ಎಸೆತದಲ್ಲಿ 82.39 ಮೀಟರ್ ಜಾವೆನೆಲಿನ್ ಎಸೆದಿದ್ದಾರೆ. ಮೂರನೇ ಎಸೆತದಲ್ಲಿ 86.37 ಮೀಟರ್ ಜಾವೆಲಿನ್ ಎಸೆದಿದ್ದಾರೆ. ನಾಲ್ಕನೇ ಎಸೆತದಲ್ಲಿ 88.13 ಮೀಟರ್ ಜಾವೆಲಿನ್ ಎಸೆದಿದ್ದಾರೆ.
ನೀರಜ್ ಚೋಪ್ರಾ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗಳಿಸಿದ್ದರು. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಸ್‌ನ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ 88.13 ಮೀ ಎಸೆದು ಬೆಳ್ಳಿ ಪದಕ ಗೆದ್ದರು.