ನವದೆಹಲಿ: ರಾಷ್ಟ್ರೀಯ ಕುಸ್ತಿಪಟು ನಿಶಾ ದಹಿಯಾ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಹರಿಯಾಣದಲ್ಲಿ ನಿಶಾ ಮತ್ತು ಆಕೆಯ ಸಹೋದರನನ್ನು ಹತ್ಯೆ ಮಾಡಲಾಗಿದೆ.
ಅಪರಿಚಿತರಿಂದ ನಿಶಾ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಕುಸ್ತಿಪಟು ನಿಶಾ ಅವರ ತಾಯಿ ಸ್ಥಿತಿ ಗಂಭೀರವಾಗಿದೆ. ರಾಷ್ಟ್ರೀಯ ಮಟ್ಟದ ಮಹಿಳಾ ಕುಸ್ತಿಪಟು ಆಗಿರುವ ನಿಶಾ ಅವರನ್ನು ಹರಿಯಾಣದ ಸೋನಿಪತ್ ನಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ನವೆಂಬರ್ 5 ರಂದು ಅವರು ಕಂಚಿನ ಪದಕವನ್ನು ಗೆದ್ದಿದ್ದರು.