
WWE ಕುಸ್ತಿ ನೋಡಿಕೊಂಡೇ ಬೆಳೆದ ದೊಡ್ಡವರಾದವರಿಗೆ ಬೇಸರವಾಗುವ ಬೆಳವಣಿಗೆಯೊಂದರಲ್ಲಿ, ’ದಿ ಅಂಡರ್‌ಟೇಕರ್’ ಕುಸ್ತಿ ಅಂಗಳಕ್ಕೆ ನಿವೃತ್ತಿ ಘೋಷಿಸಿದ್ದಾರೆ.
’ದಿ ಅಂಡರ್‌ಟೇಕರ್’ ಹೆಸರಿನ ಸ್ಟೇಜ್‌ನೇಮ್‌ನಿಂದಲೇ ಜನಪ್ರಿಯರಾದ ಮಾರ್ಕ್ ವಿಲಿಯಮ್ ಕಾಲವೇ, “ನೆಮ್ಮದಿಯಿಂದ ನಿವೃತ್ತ ಜೀವನ ನಡೆಸುವ ಕಾಲ ಬಂದಿದೆ” ಎಂದು ತಮ್ಮ ಟ್ವೀಟರ್ ಮೂಲಕ ಹೇಳಿಕೊಂಡಿದ್ದಾರೆ.
55ರ ಹರೆಯದ ಈ ವೃತ್ತಿಪರ ಕುಸ್ತಿಪಟುವಿನ ವಿದಾಯಕ್ಕೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವೇಳೆ #Undertaker30 #FarewellTaker ಟ್ಯಾಗ್‌ಗಳು ಟ್ವಿಟರ್‌ನಲ್ಲಿ ಭಾರೀ ವೈರಲ್ ಆಗಿವೆ.