ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ತನಗೆ ಸ್ಥಾನ ಸಿಗಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಮುಂಬೈನ ಯುವ ಕ್ರಿಕೆಟಿಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
27 ವರ್ಷದ ಕರಣ್ ತಿವಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈತ ಮುಂಬೈನ ಕ್ಲಬ್ ಕ್ರಿಕೆಟಿಗ ಎಂದು ತಿಳಿದು ಬಂದಿದೆ. ಇದು ಸ್ಥಳೀಯ ಟೂರ್ನಿಗಳಲ್ಲಿ ಮಿಂಚುತ್ತಿದ್ದರೂ ರಾಜ್ಯ ಮಟ್ಟದಲ್ಲಿ ಅವಕಾಶ ಸಿಕ್ಕಿರಲಿಲ್ಲ ಎಂದು ಹೇಳಲಾಗಿದೆ.
ದಕ್ಷಿಣ ಆಫ್ರಿಕಾದ ಖ್ಯಾತ ಕ್ರಿಕೆಟಿಗ ಡೇಲ್ ಸ್ಟೈನ್ ಬೌಲಿಂಗ್ ಶೈಲಿಯನ್ನು ಅನುಸರಿಸುತ್ತಿದ್ದ ಕಾರಣ ಕರಣ್ ತಿವಾರಿ ಅವರನ್ನು ಜೂನಿಯರ್ ಸ್ಟೈನ್ ಎಂದೇ ಕರೆಯಲಾಗುತ್ತಿತ್ತು. ಇದೀಗ ಯುವ ಕ್ರಿಕೆಟಿಗ ದುರಂತ ಸಾವನ್ನಪ್ಪಿದ್ದಾರೆ.