ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದು, ಐಪಿಎಲ್ ಆಟ ಮುಂದುವರೆಸಿದ್ದಾರೆ. ಚೆನ್ನೈ ಪರ ಆಟವಾಡ್ತಿರುವ ಮಹೇಂದ್ರ ಸಿಂಗ್ ಧೋನಿ ಈಗ ಮತ್ತೊಂದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಐಪಿಎಲ್ ನಲ್ಲಿ 150 ಕೋಟಿ ರೂಪಾಯಿ ಗಳಿಸಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಗಳಿಕೆ 2020ರ ಹೊಸ ಒಪ್ಪಂದಕ್ಕೂ ಮುನ್ನ 137 ಕೋಟಿ ರೂಪಾಯಿಯಾಗಿತ್ತು. ಒಪ್ಪಂದದ ನಂತ್ರ ಗಳಿಕೆ ಹೆಚ್ಚಾಗಿದ್ದು, ಧೋನಿ ದಾಖಲೆ ಬರೆದಿದ್ದಾರೆ. 2008ರಿಂದ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವ ನಿಭಾಯಿಸುತ್ತಿದ್ದಾರೆ.
ಬಜೆಟ್ ನಂತ್ರ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ಇದು ತಿಳಿದಿರಲಿ
2008ರ ಹರಾಜಿನಲ್ಲಿ ಧೋನಿ ಪ್ರಸಿದ್ಧ ಆಟಗಾರರಲ್ಲಿ ಒಬ್ಬರಾಗಿದ್ದರು. ಹಾಗೆ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ಅವ್ರನ್ನು 6 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ನಂತ್ರ ಮೂರು ವರ್ಷಗಳ ಕಾಲ ಧೋನಿ ಗಳಿಕೆ ಇಷ್ಟೇ ಇತ್ತು. 2011ರಲ್ಲಿ ಒಪ್ಪಂದದ ಮೊತ್ತ 8 ಕೋಟಿಗೆ ಏರಿಕೆಯಾಗಿತ್ತು. 2011ರಿಂದ 2013ರವರೆಗೆ ಧೋನಿ ಸಂಬಳ 8.28 ಕೋಟಿ ರೂಪಾಯಿಯಾಗಿತ್ತು. 2014ರಿಂದ 2015ರಲ್ಲಿ ಧೋನಿ ಸಂಬಳ 12.5 ಕೋಟಿಯಾಗಿತ್ತು. 2016-2017ರಲ್ಲಿ ಸಿಎಸ್ಕೆ ತಂಡ ಬ್ಯಾನ್ ಆಗಿದ್ದರಿಂದ ಪುಣೆ ತಂಡ ಸೇರಿದ್ದ ಧೋನಿಗೆ 25 ಕೋಟಿ ರೂಪಾಯಿ ಸಂಬಳ ಸಿಕ್ಕಿತ್ತು.
ಮೂರು ಬಾರಿ ಐಪಿಎಲ್ ಪ್ರಶಸ್ತಿ ವಿಜೇತ ನಾಯಕ 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆ ವಾಪಸ್ ಆಗ್ತಿದ್ದಂತೆ 60 ಕೋಟಿ ರೂ. ಗಳಿಸಿದ್ದರು. ಈಗ 150 ಕೋಟಿ ರೂಪಾಯಿಗಿಂತ ಹೆಚ್ಚು ಗಳಿಕೆಯ ಏಕೈಕ ನಾಯಕನಾಗಿದ್ದಾರೆ ಧೋನಿ. ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ. ಅವರ ಐಪಿಎಲ್ ಒಟ್ಟೂ ಗಳಿಕೆ 146.6 ಕೋಟಿ ರೂಪಾಯಿ. ಪ್ರತಿ ಋತುವಿನಲ್ಲಿ 15 ಕೋಟಿ ರೂಪಾಯಿ ಗಳಿಕೆ ಮಾಡ್ತಿದ್ದಾರೆ ರೋಹಿತ್ ಶರ್ಮಾ. ಪ್ರತಿ ಸರಣಿಯಲ್ಲಿ 17 ಕೋಟಿ ಗಳಿಕೆ ಮಾಡ್ತಿರುವ ವಿರಾಟ್ ಕೊಹ್ಲಿ ಒಟ್ಟೂ ಐಪಿಎಲ್ ಗಳಿಕೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.