![](https://kannadadunia.com/wp-content/uploads/2021/05/f66152f5-1bf2-4109-a07b-4ee5d8314b76-crop-c0-5__0-5-750x450-70.jpg)
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಧೋನಿ ಪತ್ನಿ ಸಾಕ್ಷಿ ಈ ಮಾಹಿತಿಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ. ಸಾಕ್ಷಿ ಧೋನಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ಅಭಿಮಾನಿಗಳ ಜೊತೆ ಉತ್ತಮ ಸಂಪರ್ಕ ಹೊಂದಿದ್ದಾರೆ.
ಧೋನಿ ಮನೆಗೆ ಬಂದಿರುವ ಹೊಸ ಅತಿಥಿ ಬೇರೆ ಯಾರೂ ಅಲ್ಲ ಅವರ ಕುದುರೆ ಚೇತಕ್. ಸಾಕ್ಷಿ ಇನ್ಸ್ಟಾಗ್ರಾಮ್ ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಕಪ್ಪು ಕುದುರೆ ಚೇತಕ್, ತೋಟದ ಮನೆಯಲ್ಲಿ ಬಿಳಿ ನಾಯಿಯೊಂದಿಗೆ ಆಟವಾಡುತ್ತಿರುವುದನ್ನು ನೋಡಬಹುದು.
ಇನ್ಸ್ಟಾಗ್ರಾಮ್ ನಲ್ಲಿ ವೀಡಿಯೊ ಹಂಚಿಕೊಂಡಿರುವ ಸಾಕ್ಷಿ ಧೋನಿ, ಚೇತಕ್ ಗೆ ಸ್ವಾಗತ ಕೋರಿದ್ದಾರೆ. ಕುಟುಂಬಸ್ಥರು ನಿಮ್ಮನ್ನು ಪ್ರೀತಿಯಿಂದ ಸ್ವೀಕರಿಸುತ್ತೇವೆಂದು ಬರೆದಿದ್ದಾರೆ.
ಕೊರೊನಾ ವೈರಸ್ ಕಾರಣ, ಐಪಿಎಲ್ 2021 ಅನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ. ಎಲ್ಲಾ ಆಟಗಾರರು ಮನೆಗಳಿಗೆ ಮರಳುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಶೀಘ್ರವೇ ರಾಂಚಿಗೆ ಬರಲಿದ್ದಾರೆ.