ಭಾರತ ಪುರುಷರ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಸೆಪ್ಟೆಂಬರ್ 25 ರಂದು ಮಹತ್ವದ ತೀರ್ಮಾನ ಪ್ರಕಟಿಸಲಿದ್ದಾರೆ.
ಸೆಪ್ಟೆಂಬರ್ 25 ರಂದು ಮಧ್ಯಾಹ್ನ 2 ಗಂಟೆಗೆ ನಾನು ನಿಮ್ಮೊಂದಿಗೆ ಕೆಲವು ರೋಚಕ ಸುದ್ದಿಗಳನ್ನು ಹಂಚಿಕೊಳ್ಳುತ್ತೇನೆ. ನಿಮ್ಮೆಲ್ಲರನ್ನೂ ಅಲ್ಲಿ ನೋಡುವ ಭರವಸೆ ಇದೆ ಎಂದು ಧೋನಿ ತಮ್ಮ ಪೋಸ್ಟ್ ಗೆ ಶೀರ್ಷಿಕೆ ನೀಡಿದ್ದಾರೆ.
ಧೋಣಿ ಈ ರೀತಿ ಘೋಷಣೆಯ ನಂತರ ಅವರ ಅಭಿಮಾನಿಗಳು ಅವರು ಐಪಿಎಲ್‌ನಿಂದ ನಿವೃತ್ತರಾಗಬಹುದು ಎಂದು ಊಹಿಸುತ್ತಿದ್ದಾರೆ.
2020 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದ ಅವರ ಇನ್ನೂ ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕರಾಗಿ ಉಳಿದಿದ್ದಾರೆ. ಎಂಎಸ್ ಧೋನಿ ಅವರು ಭಾರತೀಯ ಕ್ರಿಕೆಟ್ ತಂಡದ ನಾಯಕರಾಗಿ ಯಶಸ್ವಿಯಾಗಿ ತಂಡ ಮುನ್ನಡೆಸಿದ್ದರು. ಅಸಾಧಾರಣ ಮತ್ತು ವಿಶಿಷ್ಟ ಕೌಶಲ್ಯಗಳಿಗೆ, ವಿಶೇಷವಾಗಿ ಹೆಲಿಕಾಪ್ಟರ್ ಶಾಟ್ ತಂತ್ರಕ್ಕೆ ಹೆಸರುವಾಸಿಯಾಗಿದ್ದರು. ಅವರ ನಾಯಕತ್ವದ ಸಮಯದಲ್ಲಿ ಭಾರತ ತಂಡ 2007 ICC ವಿಶ್ವ ಟ್ವೆಂಟಿ 20, 2011 ICC ಕ್ರಿಕೆಟ್ ವಿಶ್ವಕಪ್ ಮತ್ತು 2013 ICC ಚಾಂಪಿಯನ್ಸ್ ಟ್ರೋಫಿಯನ್ನು ಜಯಿಸಿದೆ.
ಎಂಎಸ್ ಧೋನಿ ಬಳಿ ಐಷಾರಾಮಿ ವಾಹನಗಳ ಸಂಗ್ರಹವೇ ಇದೆ. ಅವರ ಗ್ಯಾರೇಜ್ ನಲ್ಲಿ ವಿಂಟೇಜ್‌ನಿಂದ ಐಷಾರಾಮಿ, ಫೆರಾರಿ 599 ಜಿಟಿಒ, ಹಮ್ಮರ್ ಹೆಚ್ 2, ಜಿಎಂಸಿ ಸಿಯೆರಾ ಮುಂತಾದ ಕಾರುಗಳು ಮತ್ತು ಬೈಕ್ ಗಳ ಸಂಗ್ರಹವಿದೆ.
ಅತ್ಯಂತ ಯಶಸ್ವಿ ಕ್ರಿಕೆಟಿಗರಲ್ಲಿ ಒಬ್ಬರಾದ ಧೋನಿ ವಿಶ್ವದ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ MS ಧೋನಿ ಬಟ್ಟೆ, ಮದ್ಯ ಮತ್ತು ಕೃಷಿಯಂತಹ ವಿವಿಧ ಉದ್ಯಮಗಳಲ್ಲಿ ಹೂಡಿಕೆ ಮಾಡುವ ಮೂಲಕ ಹೊಸ ವೃತ್ತಿಜೀವನಕ್ಕೆ ಕಾಲಿಟ್ಟರು. ಇತ್ತೀಚೆಗೆ ಡ್ರೋನ್ ಕಂಪನಿ ಗರುಡಾ ಏರೋಸ್ಪೇಸ್ ನಲ್ಲಿ ಹೂಡಿಕೆ ಮಾಡಿದ್ದಾರೆ.
https://www.facebook.com/photo.php?fbid=634733838019342&set=a.319108699581859&type=3
https://www.facebook.com/MSDhoni?__tn__=-UC*F