ಐಪಿಎಲ್ ಗೆ ದಿನಗಣನೆ ಶುರುವಾಗ್ತಿದ್ದಂತೆ ಎಲ್ಲ ತಂಡಗಳ ತಯಾರಿ ನಿಧಾನವಾಗಿ ಶುರುವಾಗ್ತಿದೆ. ಈ ವಾರ ಐಪಿಎಲ್ ಮತ್ತು ಫ್ರಾಂಚೈಸಿಗಳ ನಡುವೆ ಸಭೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಐಪಿಎಲ್ ತಂಡಗಳಿಗೆ ಎಸ್‌ಒಪಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊರೊನಾ ಹಿನ್ನಲೆಯಲ್ಲಿ ಎಲ್ಲ ತಂಡಗಳ ಆಟಗಾರರಿಗೆ ಕೊರೊನಾ ಪರೀಕ್ಷೆ ಕಡ್ಡಾಯವಾಗಿದೆ. ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಕೊರೊನಾ ಪರೀಕ್ಷೆಗೆ ಒಳಗಾಗಲಿದೆ. ಪರೀಕ್ಷೆ ನಂತ್ರ ಚೆನ್ನೈಗೆ ಬರುವ ತಂಡ 48 ಗಂಟೆಯೊಳಗೆ ಯುಎಇಗೆ ಪ್ರಯಾಣ ಬೆಳೆಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲೇ ಯುಎಇಗೆ ಹೋಗುವ ಪ್ಲಾನ್ ಮಾಡಿತ್ತು. ಆದ್ರೆ ಆಗಸ್ಟ್ 20ರೊಳಗೆ ಯಾವುದೇ ತಂಡ ಯುಎಇಗೆ ಹೋಗುವಂತಿಲ್ಲವೆಂದು ಬಿಸಿಸಿಐ ಹೇಳಿದೆ. ಪ್ರೋಟೋಕಾಲ್ ಮುರಿಯುವಂತಿಲ್ಲ. ಆದ್ರೆ ಪ್ರಯತ್ನ ಮುಂದುವರೆಸುತ್ತೇವೆ. ಒಪ್ಪಿಗೆ ಸಿಕ್ಕ ತಕ್ಷಣ ವೀಸಾ ಪ್ರಕ್ರಿಯೆ ಶುರು ಮಾಡುತ್ತೇವೆಂದು ಅಧಿಕಾರಿಗಳು ಹೇಳಿದ್ದಾರೆ.