ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸೀನ್ ಜಹಾನ್ ಮಧ್ಯೆಯ ಗಲಾಟೆ ತಣ್ಣಗಾಗುವಂತೆ ಕಾಣ್ತಿಲ್ಲ. ಅನೇಕ ದಿನಗಳಿಂದ ಇಬ್ಬರ ಮಧ್ಯೆ ವಿವಾದ ಶುರುವಾಗಿದೆ. ಆದ್ರೆ ಶಮಿ ವಿರುದ್ಧ ಹೊರಿಸಿರುವ ಆರೋಪಗಳು ಇನ್ನೂ ಸಾಭಿತಾಗಿಲ್ಲ. ಮೊಹಮ್ಮದ್ ಶಮಿಯಿಂದ ದೂರವಿರುವ ಹಸೀನ್ ಆಗಾಗ ಸುದ್ದಿ ಮಾಡ್ತಿರುತ್ತಾರೆ. ಈಗ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾರೆ.
ಐಪಿಎಲ್ ನಲ್ಲಿ 150 ಕೋಟಿ ರೂ. ಗಳಿಕೆ ಮಾಡಿ ದಾಖಲೆ ಬರೆದ ಧೋನಿ
ಸಾಮಾಜಿಕ ಜಾಲತಾಣ ಇನ್ಸ್ಟ್ರಾಗ್ರಾಮ್ ನಲ್ಲಿ ಹಸೀನ್ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ತನ್ನ ಹಾಗೂ ತನ್ನ ಮಗಳ ಜೀವನದಲ್ಲಿ ಶಮಿಗೆ ಯಾವುದೇ ಸ್ಥಾನವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಹಾಗೆ ತನ್ನ ಮಗಳ ಹೆಸರಿನ ಮುಂದೆ ತನ್ನ ಸರ್ ನೇಮ್ ಹಾಕಿದ್ದಾರೆ. ಮಗಳ ಫೋಟೋ ಹಾಕಿರುವ ಹಸೀನ್ ಮಗಳ ಹೆಸರಿನ ಮುಂದೆ ಶಮಿ ಸರ್ ನೇಮ್ ಬದಲು ತನ್ನ ಸರ್ ನೇಮ್ ಹಾಕಿದ್ದಾರೆ.
ಮಗಳ ಜೊತೆ ಪ್ರತ್ಯೇಕವಾಗಿ ವಾಸವಾಗಿರುವ ಹಸೀನ್, ಸಾಮಾಜಿಕ ಜಾಲತಾಣದ ಮೂಲಕವೇ ಮೊದಲ ಬಾರಿ ಶಮಿ ವಿರುದ್ಧ ಮಾತನಾಡಿದ್ದರು. ಅನೇಕ ದಿನಗಳಿಂದ ವಿವಾದ ನಡೆಯುತ್ತಿದೆ. ಪ್ರಕರಣ ಕೋರ್ಟ್ ನಲ್ಲಿದ್ದು, ಇನ್ನೂ ವಿಚ್ಛೇದನ ಸಿಕ್ಕಿಲ್ಲ. ಏಪ್ರಿಲ್ 7, 2014ರಂದು ಹಸೀನ್ ಹಾಗೂ ಶಮಿ ಮದುವೆಯಾಗಿದ್ದರು.