
ರಾಯಪುರದ ಶಾಹಿದ್ ವೀರನಾರಾಯಣ ಸಿಂಗ್ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಇಂದು ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕಿವೀಸ್ ಹೀನಾಯ ಸೋಲು ಕಂಡಿದೆ.
ಒಂದು ಪಂದ್ಯ ಬಾಕಿ ಇರುವಂತೆಯೇ ಭಾರತ ಏಕದಿನ ಸರಣಿ ಜಯಿಸಿದೆ. ಭಾರತ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ನ್ಯೂಜಿಲೆಂಡ್ ತಂಡ 34.3 ಓವರ್ ಗಳಲ್ಲಿ 108 ರನ್ ಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಗೆಲುವಿನ ಗುರಿ ಬೆನ್ನತ್ತಿದ ಭಾರತ 20.1 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿ ಗೆಲುವು ಸಾಧಿಸಿದೆ.
ಭಾರತದ ಪರ ರೋಹಿತ್ ಶರ್ಮಾ 51, ಶುಭಮನ್ ಗಿಲ್ ಅಜೇಯ 40, ವಿರಾಟ್ ಕೊಹ್ಲಿ 11, ಇಶಾನ್ ಕಿಶನ್ ಅಜೇಯ 8 ರನ್ ಗಳಿಸಿದರು. ನ್ಯೂಜಿಲೆಂಡ್ ಪರವಾಗಿ ಹೆನ್ರಿ ಶಿಪ್ಲೇ 1, ಮಿಚೆಲ್ ಸ್ಯಾಟ್ನರ್ 1 ವಿಕೆಟ್ ಪಡೆದರು.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಪರವಾಗಿ ಗ್ಲೆನ್ ಫಿಲಿಪ್ಸ್ 36, ಮಿಚೆಲ್ ಬ್ರೆಸ್ ವೆಲ್ 22, ಮಿಚೆಲ್ ಸ್ಯಾಟ್ನರ್ 27 ರನ್ ಗಳಿಸಿದರು. ಭಾರತದ ಪರ ಮೊಹಮ್ಮದ್ ಶಮಿ 3, ಹಾರ್ದಿಕ್ ಪಾಂಡ್ಯ 2, ವಾಷಿಂಗ್ಟನ್ ಸುಂದರ್ 2 ವಿಕೆಟ್ ಪಡೆದರು.