ಮೊಹಾಲಿ: ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಗಳಿಸಿದೆ. ಮೊಹಾಲಿಯಲ್ಲಿ ಭಾರತ ಇನ್ನಿಂಗ್ಸ್ ಮತ್ತು 222 ರನ್‌ಗಳಿಂದ ಲಂಕಾ ತಂಡವನ್ನು ಮಣಿಸಿದೆ.
ಭಾರತ ಇನ್ನಿಂಗ್ಸ್ ಮತ್ತು 222 ರನ್‌ಗಳ ಜಯ
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಭಾರತ ಇನ್ನಿಂಗ್ಸ್ ಮತ್ತು 222 ರನ್‌ಗಳ ಜಯ ಸಾಧಿಸಿದೆ. ಶ್ರೀಲಂಕಾ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 178 ರನ್‌ಗಳಿಗೆ ಆಲೌಟ್ ಆಯಿತು. ನಿರೋಶನ್ ಡಿಕ್ವೆಲ್ಲಾ ಅಜೇಯ 51 ರನ್ ಗಳಿಸಿದರು. ಭಾರತ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಗಳಿಸಿದೆ.
ನಿನ್ನೆ ಮೊದಲ ಇನಿಂಗ್ಸ್ ನಲ್ಲಿ 43 ಓವರುಗಳಲ್ಲಿ 4 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿದ್ದ ಶ್ರೀಲಂಕಾ ಇಂದು ಆಟ ಮುಂದುವರಿಸಿತು.
ಮೊದಲ ಇನಿಂಗ್ಸ್ ನಲ್ಲಿ ಶ್ರೀಲಂಕಾ 65 ಓವರ್ ಗಳಲ್ಲಿ 174 ರನ್ ಗೆ ಆಲೌಟ್ ಆಯಿತು. ಭಾರತದ ಪರವಾಗಿ ರವೀಂದ್ರ ಜಡೇಜಾ 5, ಆಅಶ್ವಿನ್ 2, ಜಸ್ಪ್ರೀತ್ ಬುಮ್ರಾ, 2 ಮೊಹಮ್ಮದ್ ಶಮಿ 1 ವಿಕೆಟ್ ಪಡೆದರು.
ಶ್ರೀಲಂಕಾ ಎರಡನೇ ಇನಿಂಗ್ಸ್ ನಲ್ಲಿ 178 ರನ್ ಗಳಿಸಿತು. ಡಿ ಕರುಣರತ್ನೆ 27, ಎಂಜೆಲೊ ಮ್ಯಾಥ್ಯೂಸ್ 28, ಧನಂಜಯ ಡಿಸಿಲ್ವ 30, ಚರಿತ್ರೆ ಅಸಲಂಕಾ 20, ನಿರೋಷನ್ ಡಿಕ್ವಲ್ವ 51 ರನ್ ಗಳಿಸಿದರು. ಭಾರತದ ಪರವಾಗಿ ಆರ್. ಅಶ್ವಿನ್ 4, ಮೊಹಮದ್ ಶಮಿ 2, ರವೀಂದ್ರ ಜಡೇಜ 4 ವಿಕೆಟ್ ಪಡೆದರು.
ಕ್ರಿಕೆಟ್ ಸ್ಕೋರ್ ಕಾರ್ಡ್
ಭಾರತ: 1ST INN 574/8 (129.2) ಡಿಕ್ಲೇರ್
ಶ್ರೀಲಂಕಾ: 1ST INN 174/10 (65.0), 2ND INN 178/10(60)