
ಅಂತರಾಷ್ಟ್ರೀಯ ಪಂದ್ಯಗಳಲ್ಲಿ 10 ಸಾವಿರ ರನ್ ಪೂರೈಸಿದ ಭಾರತದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆ ಮಿಥಾಲಿ ರಾಜ್ ಅವರ ಪಾಲಾಗಿದೆ.
ದಕ್ಷಿಣ ಅಫ್ರಿಕಾ ವಿರುದ್ದದ ಪಂದ್ಯದ ವೇಳೆ ಅತ್ಯುತ್ತಮ ಪ್ರದರ್ಶನ ತೋರಿದ ಮಿಥಾಲಿ ರಾಜ್ 10 ಸಾವಿರ ರನ್ ಗಳ ಗುರಿಯನ್ನು ತಲುಪಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಟ್ವೀಟ್ ಮೂಲಕ ಮಿಥಾಲಿ ರಾಜ್ ಅವರ ಸಾಧನೆಗೆ ಅಭಿನಂದಿಸಿದೆ. 10 ಸಾವಿರ ರನ್ ಗಳ ಗುರಿ ತಲುಪುವ ಮೂಲಕ ಮಿಥಾಲಿ ರಾಜ್, ಚಾರ್ಲೆಟ್ ಎಡ್ವರ್ಡ್ ಬಳಿಕ ಈ ಸಾಧನೆ ಮಾಡಿದ ವಿಶ್ವದ ಎರಡನೇ ಮಹಿಳಾ ಆಟಗಾರ್ತಿಯಾಗಿ ಹೊರ ಹೊಮ್ಮಿದ್ದಾರೆ.