40 ವರ್ಷ ದಾಟಿತು ಅಂದ್ರೆ ಸಾಕು ಆರೋಗ್ಯವನ್ನ ಕಾಪಾಡಿಕೊಳ್ಳೋದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸುತ್ತೆ. ಹೀಗಾಗಿಯೇ ಬಹುತೇಕ ಮಂದಿ ಈ ವಯಸ್ಸಿಗೆ ಬರ್ತಿದ್ದಂತೆ ನಿವೃತ್ತಿ ಜೀವನದ ಬಗ್ಗೆ ಯೋಚನೆ ಮಾಡೋಕೆ ಶುರು ಮಾಡ್ತಾರೆ.
ಆದರೆ ಈ ಎಲ್ಲಾ ಮಾತಿಗೆ ವಿರುದ್ಧವಾಗಿ ನಿಂತ 47 ವರ್ಷದ ಶ್ಯಾಮಲಾ ಗೋಲಿ ಎಂಬ ತೆಲಂಗಾಣದ ಮಹಿಳೆ ಪಾಲ್ಕ್ ಸ್ಟ್ರೇಟ್ (ರಾಮ್ ಸೇತು)ನಲ್ಲಿ 13 ಗಂಟೆ 47 ನಿಮಿಷಗಳ ಸಮಯದಲ್ಲಿ 30 ಕಿಲೋಮೀಟರ್ ಈಜಿ ಸಾಧನೆ ಮಾಡಿದ್ದಾರೆ. ಬುಲಾ ಚೌಧರಿಯ ದಾಖಲೆಯನ್ನ ಪುಡಿ ಮಾಡಿದ ಶ್ಯಾಮಲಾ ರಾಮ್ ಸೇತುವಿನಲ್ಲಿ ಈಜಿದ ದೇಶದ ಎರಡನೇ ಮಹಿಳೆ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಶ್ಯಾಮಲಾ, ನಾನು ಕಳೆದ ವರ್ಷವೇ ಈ ಸಾಧನೆಯನ್ನ ಮಾಡೋಕೆ ಎಲ್ಲಾ ರೀತಿಯ ತಯಾರಿಯನ್ನ ಮಾಡಿದ್ದೆ. ಅದರೆ ಕೊರೊನಾ ವೈರಸ್ನಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಲಾಕ್ಡೌನ್ , ಕೊರೊನಾ ಮಾರ್ಗಸೂಚಿಗಳ ಕಾರಣದಿಂದಾಗಿ ನನಗೆ ಅನುಮತಿ ಸಿಗೋದು ವಿಳಂಬವಾಯ್ತು. ಆದರೆ ಈ ವರ್ಷ ನಾನು ಈಜಲು ಅನುಮತಿ ಪಡೆದೆ. ನನ್ನ ಕೋಚ್ ಹಾಗೂ ಹಿರಿಯ ಐಪಿಎಸ್ ಅಧಿಕಾರಿ ರಾಜೀವ್ ತ್ರಿವೇದಿ ನನಗೆ ತುಂಬಾನೇ ಸಹಾಯ ಮಾಡಿದ್ರು ಎಂದು ಹೇಳಿದ್ದಾರೆ.