ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕಡಕನಾಥ್ ಕೋಳಿ ಸಾಕಣಿಕೆ ಮಾಡ್ತಿದ್ದಾರೆ. ಆದ್ರೆ ಅವ್ರ ಫಾರ್ಮ್ ನಲ್ಲಿದ್ದ 2.5 ಕೋಟಿ ಕೋಳಿಗಳಿಗೆ ಈಗ ಸಂಕಷ್ಟ ಎದುರಾಗಿದೆ. ಧೋನಿ ಕೋಳಿ ಮರಿಗಳನ್ನು ಖರೀದಿ ಮಾಡಿದ್ದ ಸ್ಥಳದಲ್ಲಿ ಹಕ್ಕಿ ಜ್ವರವಿರುವುದು ದೃಡಪಟ್ಟಿದೆ. ಇದು ಧೋನಿ ಫಾರ್ಮ್ ನಲ್ಲಿದ್ದ ಎಲ್ಲ ಕೋಳಿಗಳ ಮೇಲೆ ಪರಿಣಾಮ ಬೀರಿದ್ದು, ಫಾರ್ಮ್ ನಲ್ಲಿರುವ ಎಲ್ಲ ಕೋಳಿಗಳನ್ನು ಕೊಲ್ಲಬಹುದು ಎಂಬ ಆತಂಕ ಎದುರಾಗಿದೆ.
ಕಡಕನಾಥ್ ಕೋಳಿಗೆ ಹೆಚ್ಚಿನ ಬೇಡಿಕೆಯಿದೆ. ಹಾಗೆ ಅದ್ರ ಬೆಲೆ ಕೂಡ ಹೆಚ್ಚು. ಕಡಕನಾಥ್ ಕೋಳಿ ಬೆಲೆ ಮಾರುಕಟ್ಟೆಯಲ್ಲಿ ಮೂರರಿಂದ ನಾಲ್ಕು ಸಾವಿರ ರೂಪಾಯಿಯಿದೆ. ಕೋಳಿ ಮರಿಗಳು 6-7 ತಿಂಗಳಲ್ಲಿ ಮೊಟ್ಟೆ ಇಡಲು ಶುರು ಮಾಡುತ್ತವೆ. ಒಂದು ಕೋಳಿ ಮರಿ ಬೆಲೆ 80ರಿಂದ 100 ರೂಪಾಯಿಯಿದೆ. ಇದ್ರ ಮೊಟ್ಟೆಗಳಿಗೆ ನಿಗದಿತ ಬೆಲೆಯಿಲ್ಲ. ಸದ್ಯ ಒಂದು ಮೊಟ್ಟೆ ಬೆಲೆ 20ರಿಂದ 30 ರೂಪಾಯಿ.
ಕಡಕನಾಥ್ ಕೋಳಿ ಮಾಂಸಕ್ಕೆ ಹೆಚ್ಚಿನ ಬೆಲೆಯಿದೆ. ಚಿಕನ್ ಬೆಲೆ 800ರಿಂದ 1000 ರೂಪಾಯಿಯಿದೆ. ಕೆಲ ಸಂದರ್ಭದಲ್ಲಿ ಇದ್ರ ಬೆಲೆ 1400ರಿಂದ ಎರಡು ಸಾವಿರಕ್ಕೆ ಹೋಗಿದ್ದೂ ಇದೆ. ಸಾಮಾನ್ಯ ಕೋಳಿಗಿಂತ ಕಡಕನಾಥ್ ಕೋಳಿ ಆರೋಗ್ಯಕ್ಕೆ ಒಳ್ಳೆಯದು. ಇದ್ರಲ್ಲಿ ಕಡಿಮೆ ಕೊಲೆಸ್ಟ್ರಾಲ್ ಇರುವ ಕಾರಣ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುವ ರೋಗಿಗಳ ಕೂಡ ಇದನ್ನು ಸೇವನೆ ಮಾಡಬಹುದು.