ನವದೆಹಲಿ: ಮಧ್ಯಪ್ರದೇಶದ ಮಹಿಳಾ ಕ್ರಿಕೆಟರ್ ಅನ್ಷುಲಾ ರಾವ್ ಡೋಪಿಂಗ್ ನಲ್ಲಿ ಸಿಕ್ಕಿಬಿದ್ದಿದ್ದಾರೆ. ಮಧ್ಯಪ್ರದೇಶದ ಅಂಡರ್ 23 ಮಹಿಳಾ ಕ್ರಿಕೆಟರ್ ಅನ್ಷುಲಾ ರಾವ್ ಉದ್ದೀಪನ ಮದ್ದು ಸೇವನೆ ಮಾಡಿರುವುದು ಪರೀಕ್ಷೆ ವೇಳೆ ಗೊತ್ತಾಗಿದೆ.
ಉದ್ದಿಪನ ಸೇವನೆ ಪರೀಕ್ಷೆ ವೇಳೆ ಸಿಕ್ಕಿಬಿದ್ದ ಭಾರತದ ಮೊದಲ ಮಹಿಳಾ ಕ್ರಿಕೆಟರ್ ಎನ್ನುವ ಅಪಖ್ಯಾತಿಗೆ ಅವರು ಒಳಗಾಗಿದ್ದಾರೆ. ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕ(ನಾಡಾ) ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.
2020ರ ಮಾರ್ಚ್ 14 ರಂದು ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕದಿಂದ ಡೋಪಿಂಗ್ ಟೆಸ್ಟ್ ನಡೆಸಲಾಗಿದ್ದು, ಅವರು ಫೇಲ್ ಆಗಿದ್ದಾರೆ. ಅವರಿಗೆ ಎರಡರಿಂದ ನಾಲ್ಕು ವರ್ಷ ನಿಷೇಧ ಶಿಕ್ಷೆ ಜಾರಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.