
ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಇತಿಹಾಸವನ್ನು ನಿರ್ಮಿಸಿದ್ದಾರೆ. ಸೋಮವಾರ ರಾಬರ್ಟ್ ಲೆವಾಂಡೋವ್ಸ್ಕಿ ಮತ್ತು ಜೋರ್ಗಿನ್ಹೋ ಅವರನ್ನು ಸೋಲಿಸಿ ವಿಶ್ವದ ಅತ್ಯುತ್ತಮ ಆಟಗಾರನಾಗಿ ಹೊರಹೊಮ್ಮಿ 7 ನೇ ಬ್ಯಾಲನ್ ಡಿ’ಓರ್ ಪ್ರಶಸ್ತಿ ಗೆದ್ದರು.
ಮೊದಲ ಬಾರಿಗೆ ಕೋಪಾ ಅಮೇರಿಕಾ ಗೆದ್ದ ನಂತರ ಮೆಸ್ಸಿ 2009, 2010, 2011, 2012, 2015 ಮತ್ತು 2019 ಟ್ರೋಫಿಗಳನ್ನು ಸೇರ್ಪಡೆ ಮಾಡಿಕೊಂಡರು. ಮತ್ತೊಮ್ಮೆ ಇಲ್ಲಿಗೆ ಬಂದಿರುವುದು ನಂಬಲಸಾಧ್ಯವಾಗಿದೆ. ಎರಡು ವರ್ಷಗಳ ಹಿಂದೆ ಇದು ಕೊನೆಯ ಬಾರಿ ಎಂದು ನಾನು ಭಾವಿಸಿದ್ದೆ. ಕೋಪಾ ಅಮೇರಿಕಾವನ್ನು ಗೆಲ್ಲುವುದು ಪ್ರಮುಖವಾಗಿತ್ತು ಎಂದು ಪ್ಯಾರಿಸ್‌ನ ಥಿಯೇಟರ್ ಡು ಚಾಟೆಲೆಟ್ ನಲ್ಲಿ ಮೆಸ್ಸಿ ಹೇಳಿದ್ದಾರೆ.
ಈ ಕೋಪಾ ಅಮೇರಿಕಾ ಪ್ರಶಸ್ತಿಯು ನನಗೆ ವಿಶೇಷ ವರ್ಷವಾಗಿದೆ. ಮರಕಾನಾ ಕ್ರೀಡಾಂಗಣದಲ್ಲಿ ಗೆಲ್ಲಲು ಇದು ಪ್ರಮುಖವಾಗಿದೆ. ಅರ್ಜೆಂಟೀನಾದ ಜನರೊಂದಿಗೆ ಸಂಭ್ರಮ ಆಚರಿಸಲು ನನಗೆ ತುಂಬಾ ಸಂತೋಷವಾಯಿತು. ಇದು ನನ್ನ ಜೀವನದ ಅತ್ಯುತ್ತಮ ವರ್ಷ ಎಂದು ನನಗೆ ತಿಳಿದಿರಲಿಲ್ಲ, ನಾನು ಸುದೀರ್ಘ ವೃತ್ತಿಜೀವನ ಹೊಂದಿದ್ದೇನೆ, ಆದರೆ ಕಠಿಣ ಸಮಯ ಮತ್ತು ಟೀಕೆಗಳ ನಂತರ ಅರ್ಜೆಂಟೀನಾದೊಂದಿಗಿನ ಪ್ರಶಸ್ತಿಗಳಲ್ಲಿ ಇದು ವಿಶೇಷವಾಗಿದೆ ಎಂದು ತಿಳಿಸಿದ್ದಾರೆ.