ಟೀಂ ಇಂಡಿಯಾ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್, ತಾವು ಲೆಗ್ ಸ್ಪಿನ್ ಬೌಲಿಂಗ್ ಮಾಡಲು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ರಿಂದ ಪ್ರೇರಣೆ ಪಡೆದಿರೋದಾಗಿ ಹೇಳಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದ ಚಹಲ್ ಇದೀಗ ತಂಡಕ್ಕೆ ಬಲಿಷ್ಠ ಬೌಲಿಂಗ್ ಶಕ್ತಿಯಾಗಿ ನಿಂತಿದ್ದಾರೆ. ತಮ್ಮ ಲೆಗ್ ಸ್ಪಿನ್ ಬೌಲಿಂಗ್ ಕರಾಮತ್ತಿನ ಬಗ್ಗೆ ಸಿಕ್ರೇಟ್ ಶೇರ್ ಮಾಡಿರುವ ಚಹಲ್, ಶೇನ್ವಾರ್ನ್ರ ವಿಡಿಯೋಗಳನ್ನ ನೋಡಿ ನಾನು ಈ ಬೌಲಿಂಗ್ ಶೈಲಿ ಕಲಿತೆ ಎಂದಿದ್ದಾರೆ.
ಆಗೆಲ್ಲ ಪತ್ರಿಕೆಗಳಲ್ಲಿ ಶೇನ್ವಾರ್ನ್ ಬೌಲಿಂಗ್ ಬಗ್ಗೆ ಸಾಕಷ್ಟು ವರದಿಗಳು ಬಿತ್ತರವಾಗ್ತಿತ್ತು. ಇದನ್ನೆಲ್ಲ ನೋಡುತ್ತಿದ್ದ ನನಗೆ ಅವರಂತೆ ಬೌಲಿಂಗ್ ಮಾಡಬೇಕು ಎಂಬ ಆಸಕ್ತಿ ಮೂಡಿತು. ಹೀಗಾಗಿ ನಾನು ವಾರ್ನ್ರ ಬೌಲಿಂಗ್ ವಿಡಿಯೋಗಳನ್ನ ನೋಡೋಕೆ ಆರಂಭಿಸಿದೆ . ಆ ಮೂಲಕ ನಾನು ಲೆಗ್ ಸ್ಪಿನ್ ಬೌಲಿಂಗ್ನ್ನು ಕರಗತ ಮಾಡಿಕೊಂಡೆ ಎಂದು ಖಾಸಗಿ ಕಾರ್ಯಕ್ರಮವೊಂದರಲ್ಲಿ ಚಹಲ್ ಹೇಳಿದ್ದಾರೆ.
ಆಸ್ಟ್ರೇಲಿಯಾ ತಂಡ ಕಂಡ ಶ್ರೇಷ್ಠ ಬೌಲರ್ಗಳಲ್ಲಿ ಒಬ್ಬರಾದ ಶೇನ್ ವಾರ್ನ್, ಟೆಸ್ಟ್ ಕ್ರಿಕೆಟ್ನಲ್ಲಿ 708 ವಿಕೆಟ್ಗಳನ್ನ ಕಬಳಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 293 ವಿಕೆಟ್ಗಳನ್ನ ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ.