ಟೀಮ್ ಇಂಡಿಯಾದ ಬೌಲರ್ ಕುಲದೀಪ್ ಯಾದವ್ ಕೊರೊನಾದ ಮೊದಲ ಡೋಸ್ ಪಡೆದಿದ್ದಾರೆ. ಲಸಿಕೆ ತೆಗೆದುಕೊಳ್ಳುವ ಫೋಟೋವನ್ನು ಕುಲದೀಪ್ ಯಾದವ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕುಲದೀಪ್ ಫೋಟೋ ಈಗ ವಿವಾದಕ್ಕೆ ಕಾರಣವಾಗಿದೆ.
ಕುಲದೀಪ್ ಫೋಟೋವನ್ನು ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಲಸಿಕೆ ಪಡೆಯುವಂತೆ ಮನವಿ ಮಾಡಿದ್ದಾರೆ. ಲಸಿಕೆ ಲಭ್ಯವಾದ ತಕ್ಷಣ ಲಸಿಕೆ ಹಾಕಿಕೊಳ್ಳಿ. ಕೊರೊನಾ ಹೆಚ್ಚಾಗಿರುವ ಕಾರಣ ಮನೆಯಲ್ಲಿ ಸುರಕ್ಷಿತವಾಗಿರಿ ಎಂದು ಅವರು ಟ್ವಿಟ್ ಮಾಡುದ್ದಾರೆ.
ಕುಲದೀಪ್ ಆಸ್ಪತ್ರೆಗೆ ಹೋಗಿಲ್ಲ. ಹುಲ್ಲು ಹಾಸಿನ ಮೇಲೆ ಕುಳಿತು ಅವರು ಲಸಿಕೆ ಪಡೆದಿದ್ದಾರೆ. ಇದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗ್ತಿದೆ. ಕೊರೊನಾ ಪ್ರೊಟೊಕಾಲ್ ಪಾಲಿಸುವ ಬದಲು ವಿಐಪಿಗೆ ವಿಶೇಷ ಟ್ರೀಟ್ಮೆಂಟ್ ನೀಡಿರುವ ಬಗ್ಗೆ ಈಗ ತನಿಖೆಯಾಗ್ತಿದೆ.
ನಗರ ಮ್ಯಾಜಿಸ್ಟ್ರೇಟ್ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ. ಇದರಲ್ಲಿ ಜಗೇಶ್ವರ ಆಸ್ಪತ್ರೆಯಲ್ಲಿಯೇ ಲಸಿಕೆ ನೀಡಲಾಗಿದೆ ಎಂಬ ಮಾಹಿತಿಯಿದೆ. ಆದ್ರೆ ಅಧಿಕಾರಿಯೊಬ್ಬರು, ಗೋವಿಂದ್ ನಗರದ ಜಗೇಶ್ವರ ಆಸ್ಪತ್ರೆಯಲ್ಲಿ ಕುಲದೀಪ್‌ಗೆ ಲಸಿಕೆ ಹಾಕಬೇಕಿತ್ತು. ಆದರೆ ಅವರಿಗೆ ಕಾನ್ಪುರ ಮಹಾನಗರ ಪಾಲಿಕೆಯಲ್ಲಿ ಲಸಿಕೆ ಹಾಕಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.