ಶಾರ್ಜಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಕಪ್ ಗೆಲ್ಲುವ ಕನಸು ಈ ಬಾರಿಯೂ ಈಡೇರಿಲ್ಲ. ಎಲಿಮಿನೇಟರ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ ಗಳಿಂದ ಪರಾಭವಗೊಂಡ ಆರ್ಸಿಬಿ 14ನೇ ಆವೃತ್ತಿಯ ಐಪಿಎಲ್ ಅಭಿಯಾನ ಕೊನೆಗೊಳಿಸಿದೆ.
ನಾಯಕತ್ವಕ್ಕೆ ವಿದಾಯ ಹೇಳಿರುವ ವಿರಾಟ್ ಕೊಹ್ಲಿ ಸೇರಿದಂತೆ ಕೋಟ್ಯಂತರ ಅಭಿಮಾನಿಗಳ ಕನಸು ನುಚ್ಚುನೂರಾಗಿದೆ.
ಶಾರ್ಜಾ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡಿದ್ದು, 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿದೆ. ಕೊಲ್ಕತ್ತಾ ನೈಟ್ ರೈಡರ್ಸ್ 19.4 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿ ಎರಡನೇ ಕ್ವಾಲಿಫೈಯರ್ ಗೆ ಲಗ್ಗೆಯಿಟ್ಟಿದೆ. ಕೆಕೆಆರ್ ಎದುರು ಮುಗ್ಗರಿಸಿದ ಆರ್ಸಿಬಿ ಟೂರ್ನಿಯಿಂದ ಹೊರಬಿದ್ದಿದೆ.
ಆರ್ಸಿಬಿ ಪರವಾಗಿ ದೇವದತ್ ಪಡಿಕಲ್ 21, ವಿರಾಟ್ ಕೊಹ್ಲಿ 39, ಮ್ಯಾಕ್ಸ್ವೆಲ್ 15 ರನ್ ಗಳಿಸಿದರು. ಕೆಕೆಆರ್ ಪರ ಸುನಿಲ್ ನರೈನ್ 4, ಲೂಕಿ ಫರ್ಗುಸನ್ 2 ವಿಕೆಟ್ ಪಡೆದರು. ಕೊಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಶುಭಮನ್ ಗಿಲ್ 29, ವೆಂಕಟೇಶ್ ಅಯ್ಯರ್ 26, ನಿತೀಶ್ ರಾಣಾ 23, ಸುನೀಲ್ ನರೈನ್ 26 ರನ್ ಗಳಿಸಿದ್ದು, ಆರ್ಸಿಬಿ ಪರ ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಯಜುವೇಂದ್ರ ಚಾಹಲ್ ತಲಾ 2 ವಿಕೆಟ್ ಪಡೆದರು.