alex Certify ಕೋವಿಡ್​ ವಿರುದ್ಧದ ಹೋರಾಟಕ್ಕೆ 11 ಕೋಟಿ ರೂ. ಮೊತ್ತದ ದೇಣಿಗೆ ಸಂಗ್ರಹಿಸಿದ ಕೊಹ್ಲಿ ದಂಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ ವಿರುದ್ಧದ ಹೋರಾಟಕ್ಕೆ 11 ಕೋಟಿ ರೂ. ಮೊತ್ತದ ದೇಣಿಗೆ ಸಂಗ್ರಹಿಸಿದ ಕೊಹ್ಲಿ ದಂಪತಿ

ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ತಮ್ಮ ಕೋವಿಡ್​ 19 ದೇಣಿಗೆ ಸಂಗ್ರಹ ಕಾರ್ಯಕ್ರಮದಲ್ಲಿ 11 ಕೋಟಿ ರೂಪಾಯಿಗಳನ್ನ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖುದ್ದು ಕೊಹ್ಲಿ ದಂಪತಿ ಕೋವಿಡ್​ 19 ವಿರುದ್ಧದ ಹೋರಾಟಕ್ಕೆ ಸಾಥ್​ ನೀಡಲು 2 ಕೋಟಿ ರೂಪಾಯಿಗಳನ್ನ ನೀಡಿದ್ದರು.

ಕೊಹ್ಲಿ ದಂಪತಿ 7 ಕೋಟಿ ರೂಪಾಯಿಯನ್ನ ಸಂಗ್ರಹಿಸುವ ಗುರಿಯನ್ನ ಹೊಂದಿದ್ದಾರೆ. ಆದರೆ ಈ ಗುರಿಯನ್ನ ತಲುಪಲು ಇನ್ನೂ ಎರಡು ದಿನ ಬಾಕಿ ಇರುವಾಗಲೇ 11 ಕೋಟಿ ರೂಪಾಯಿಗಳನ್ನ ಸಂಗ್ರಹಿಸಿದ್ದಾರೆ. ಎಂಪಿಎಲ್​ ಸ್ಪೋರ್ಟ್ಸ್ ಫೌಂಡೇಶನ್​ ಕೂಡ ಈ ಅಭಿಯಾನಕ್ಕೆ 5 ಕೋಟಿ ರೂಪಾಯಿ ದೇಣಿಗೆ ನೀಡಿದೆ.

ಮಕ್ಕಳನ್ನು ಕೊರೊನಾದಿಂದ ರಕ್ಷಿಸಬೇಕೆಂದ್ರೆ ಪಾಲಕರಿಗೆ ಅಗತ್ಯ ‘ಲಸಿಕೆ’

ಮೊದಲು ಕೊಹ್ಲಿ ಹಾಗೂ ಅನುಷ್ಕಾ ದಂಪತಿ ವೈಯಕ್ತಿಕವಾಗಿ 2 ಕೋಟಿ ಹಣವನ್ನ ದೇಣಿಗೆ ರೂಪದಲ್ಲಿ ನೀಡಿದ್ದರು. ಇದಾದ ಬಳಿಕ ಕೆಟೊ ಅಡಿಯಲ್ಲಿ ಕೋವಿಡ್​ ವಿರುದ್ಧದ ಹೋರಾಟಕ್ಕೆ ಸಹಾಯ ಮಾಡುವ ಸಲುವಾಗಿ 7 ಕೋಟಿ ರೂಪಾಯಿಗಳನ್ನ ಸಂಗ್ರಹಿಸುವುದು ಕೊಹ್ಲಿ ದಂಪತಿಯ ಗುರಿಯಾಗಿತ್ತು. ಕೆಟೊ ಮೂಲಕ ನಡೆದ 7 ದಿನಗಳ ಅಭಿಯಾನ ಪೂರ್ಣಗೊಳ್ಳಲು 2 ದಿನ ಬಾಕಿ ಇರುವಾಗಲೇ ಕೊಹ್ಲಿ ದಂಪತಿ 11 ಕೋಟಿ ರೂಪಾಯಿ ಹಣವನ್ನ ಸಂಗ್ರಹಿಸಿದಂತಾಗಿದೆ.

ಕೊರೊನಾ ವಿರುದ್ಧದ ಹೋರಾಟಕ್ಕೆ ಈ ಹಿಂದೆಯೂ ಸಾಥ್​ ನೀಡಿದ್ದ ಕೊಹ್ಲಿ ದಂಪತಿ 3 ಕೋಟಿ ರೂಪಾಯಿಗಳನ್ನ ದೇಣಿಗೆ ರೂಪದಲ್ಲಿ ನೀಡಿದ್ದನ್ನೂ ನಾವಿಲ್ಲ ಸ್ಮರಿಸಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...