ಕೊಲಂಬೊ: ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಸೂಪರ್ 4 ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕೆ.ಎಲ್. ರಾಹುಲ್ ಭರ್ಜರಿ ಶತಕ ಗಳಿಸಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಕೂಡ ಭರ್ಜರಿ ಶತಕ ಸಿಡಿಸಿದ್ದಾರೆ.
ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ 47ನೇ ಶತಕ ಬಾರಿಸಿದ್ದಾರೆ. ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಸತತ ನಾಲ್ಕನೇ ಶತಕ ಗಳಿಸಿದ್ದಾರೆ. ಅಲ್ಲದೇ, ಏಕದಿನ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ 13 ಸಾವಿರ ರನ್ ಬಾರಿಸಿದ್ದಾರೆ.
278 ಏಕದಿನ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 13,024 ರನ್ ಗಳಿಸಿದ್ದಾರೆ. 47 ಶತಕ, 65 ಅರ್ಧ ಶತಕ ಸಿಡಿಸಿದ್ದಾರೆ.
ಭಾರತ 50 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿದೆ. ವಿರಾಟ್ ಕೊಹ್ಲಿ ಅಜೇಯ 122, ಕೆ.ಎಲ್. ರಾಹುಲ್ ಅಜೇಯ 111 ರನ್ ಗಳಿಸಿದ್ದಾರೆ.