ಲಖನೌ: ಐಪಿಎಲ್ ನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಹಾಗೂ ಟೀಂ ಇಂಡಿಯಾ ಮಾಜಿ ಉಪನಾಯಕ ಕೆ.ಎಲ್. ರಾಹುಲ್ ಟಿ20 ಮಾದರಿಯಲ್ಲಿ ಅತಿ ವೇಗವಾಗಿ 7 ಸಾವಿರ ರನ್ ಗಳಿಸಿದ ದಾಖಲೆ ಬರೆದಿದ್ದಾರೆ.
ಶನಿವಾರ ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೆ.ಎಲ್. ರಾಹುಲ್ 61 ರನ್ ಗಳಿಸಿದ್ದಾರೆ. ಅವರು ಟಿ20 ಆವೃತ್ತಿಯಲ್ಲಿ 7,000 ರನ್ ಪೂರೈಸುವ ಮೂಲಕ ಅತಿ ವೇಗವಾಗಿ ಈ ಸಾಧನೆ ಮಾಡಿದ ಭಾರತೀಯ ಬ್ಯಾಟರ್ ಎನ್ನಿಸಿಕೊಂಡಿದ್ದಾರೆ.
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನು ಕೆ.ಎಲ್. ರಾಹುಲ್ ಅಳಿಸಿ ಹಾಕಿದ್ದಾರೆ. ಕೆ.ಎಲ್. ರಾಹುಲ್ 197 ಇನಿಂಗ್ಸ್ ಗಳಲ್ಲಿ 7 ಸಾವಿರ ರನ್ ಪೂರೈಸಿದ್ದಾರೆ. ವಿರಾಟ್ ಕೊಹ್ಲಿ 212 ಇನಿಂಗ್ಸ್, ಗಳಲ್ಲಿ 7000 ರನ್ ಗಳಿಸಿದ್ದಾರೆ. ಶಿಖರ್ ಧವನ್ 246, ಸುರೇಶ್ ರೈನಾ 251, ರೋಹಿತ್ ಶರ್ಮಾ 258 ಇನ್ನಿಂಗ್ಸ್ ಗಳಲ್ಲಿ 7000 ರನ್ ಗಳಿಸಿದ್ದಾರೆ. ಪಾಕಿಸ್ತಾನದ ಬಾಬರ್ ಅಜಂ 187, ವಿಂಡೀಸ್ ನ ಕ್ರಿಸ್ ಗೇಲ್ 192 ಇನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ.