
ರೆಟ್ರೋ ಸಮವಸ್ತ್ರದಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಗೆ ಕಣಕ್ಕಿಳಿಯಲಿರುವ ಟೀಂ ಇಂಡಿಯಾಗೆ 1992ರ ವಿಶ್ವಕಪ್‌ನ ಪ್ಯಾಟರ್ನ್ ಇರುವ ಕಿಟ್‌ಗಳನ್ನು ವಿತರಿಸಲಾಗಿದೆ.
ಈ ವಿಚಾರವಾಗಿ ಟ್ವಿಟರ್‌ನಲ್ಲಿ ತಮ್ಮ ಸಂತಸ ಹಂಚಿಕೊಂಡಿರುವ ಮಾಜಿ ಕ್ರಿಕೆಟಿಗ ಕಿರಣ್ ಮೋರೆ, “ನೋಡಿ ನನ್ನ ಬಳಿ ಏನು ಸಿಕ್ಕಿದೆ…! 1992ರ ವಿಶ್ವಕಪ್‌ನ ಒರಿಜಿನಲ್ ಜರ್ಸಿ ಸಿಕ್ಕಿದೆ. ಇದು ಈಗಲೂ ನನಗೆ ಚೆನ್ನಾಗಿ ಫಿಟ್ ಆಗುತ್ತದೆ. ಇದು ಹಳೆಯ ಸುಮಧುರ ಕ್ಷಣಗಳನ್ನು ಮತ್ತೆ ಮುಂದಕ್ಕೆ ತಂದಿದೆ. ಎಂಥ ಟೂರ್ನಮೆಂಟ್ ಅದು, ಶ್ರೇಷ್ಠ ರಿಚಿ ಬೆನೌ ಕಾಮೆಂಟರಿ ವೇಳೆ ಹೇಳುವಂತೆ: ಸಿಂಪ್ಲಿ ಸೂಪರ್ಬ್ #cricket” ಎಂದು ಟ್ವೀಟ್ ಮಾಡಿದ್ದಾರೆ ಮೋರೆ.
ಇದೇ ವೇಳೆ, ಸಿಡ್ನಿಯಲ್ಲಿ ನಡೆದ ಟೂರ್ನಿಯ ಉದ್ಘಾಟನಾ ಸಮಾರಂಭದ ವಿಡಿಯೋವನ್ನು ಮೋರೆ ಶೇರ್ ಮಾಡಿಕೊಂಡಿದ್ದರು.