ಆಸ್ಟ್ರೇಲಿಯಾದಲ್ಲಿ ಕಾಂಗರೂಗಳು ತಮ್ಮ ವಿಚಿತ್ರ ಹಾಗೂ ಅಪಾಯಕಾರಿ ವರ್ತನೆಯಿಂದ ಆಗಾಗ ವೃತ್ತ ಪತ್ರಿಕೆಗಳ ಹೆಡ್ ಲೈನ್ ನಲ್ಲಿ ಬರುತ್ತಿರುತ್ತವೆ.
ಎಂಥದ್ದೇ ದಾಡಸಿ ವ್ಯಕ್ತಿಯಾದರೂ ಅವುಗಳ ಬಲಶಾಲಿ ಗುದ್ದು ಹಾಗೂ ಒದೆ ಎದುರಿಸುವುದು ಎಂದರೆ ಘಾಸಿಗೊಳ್ಳಲು ಆಹ್ವಾನ ನೀಡಿದಂತೆಯೇ. ಇತ್ತೀಚೆಗೆ ನಡು ರಸ್ತೆಯಲ್ಲಿ ಕಾಂಗರೂಗಳೆರಡು ಕಾಳಗಕ್ಕೆ ಇಳಿದ ವಿಡಿಯೋವೊಂದನ್ನು ಕುಟುಂಬವೊಂದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿತ್ತು.
ಈಗ ನ್ಯೂ ಸೌತ್ ವೇಲ್ಸ್ ನ ಫುಟ್ಬಾಲ್ ಮೈದಾನದಲ್ಲಿ ಫುಟ್ಬಾಲ್ ಪಂದ್ಯವೊಂದು ನಡೆಯುತ್ತಿರುವ ಸಂದರ್ಭದಲ್ಲಿ ಕಾಂಗರೂಗಳೂ ಜಿಗಿಯುತ್ತ ನಡುವೆ ಆಟವಾಡುತ್ತಿರುವ ವಿಡಿಯೋವೊಂದನ್ನು ಶರ್ರಿ ಕಾಸ್ಟೆಲರಿ ಎಂಬುವವರು ಶೇರ್ ಮಾಡಿದ್ದಾರೆ.
ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಆಸ್ಟ್ರೇಲಿಯನ್ ಫುಟ್ಬಾಲ್ ಲೀಗ್ ಕೂಡ್ ಟ್ವೀಟ್ ಮಾಡಿದ್ದು “ನ್ಯೂ ಸೌತ್ ವೆಲ್ಸ್ ನಲ್ಲಿ ಸಾಮೂಹಿಕ ಫುಟ್ಬಾಲ್ ಆಟ ಮರಳಿದೆ. ಸ್ಥಳೀಯರು ಖುಷಿಗಾಗಿ ಜಿಗಿಯುತ್ತಿದ್ದಾರೆ” ಎಂದು ಕ್ಯಾಪ್ಶನ್ ನೀಡಲಾಗಿದೆ. ಕೇವಲ 8 ಸೆಕೆಂಡ್ ನ ಈ ವಿಡಿಯೋ ಟ್ವಿಟರ್ ನಲ್ಲಿ 43 ಸಾವಿರ ವೀಕ್ಷಣೆ ಪಡೆದಿದೆ. ನೂರಾರು ಜನ ರೀ ಟ್ವೀಟ್ ಹಾಗೂ ಲೈಕ್ ಮಾಡಿದ್ದಾರೆ. ಫೇಸ್ ಬುಕ್ ಹಾಗೂ ಇನ್ಸ್ಸ್ಟಾಗ್ರಾಂ ನಲ್ಲೂ ವಿಡಿಯೋ ಶೇರ್ ಆಗಿದೆ.