
ಗೌತಮ್ ಗಂಭೀರ್ ನನ್ನು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್. ಧೋನಿ ಅಭಿಮಾನಿಗಳು ಕ್ರಿಕೆಟ್ ಲೋಕದ ಕಂಗನಾ ರಣಾವತ್ ಎಂದು ಟೀಕಿಸಿದ್ದಾರೆ.
ಶಾರ್ಜಾದಲ್ಲಿ ಸಿ.ಎಸ್.ಕೆ. – ರಾಜಸ್ತಾನ್ ರಾಯಲ್ಸ್ ನಡುವೆ ನಡೆದ ಪಂದ್ಯದ ವೇಳೆ ಧೋನಿ 7ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದಕ್ಕೆ ಗಂಭೀರ್ ಕಾಲೆಳೆದು ಟ್ವೀಟ್ ಮಾಡಿದ್ದರು.
ಅಷ್ಟೇ ಅಲ್ಲದೆ, ರಾಜಸ್ತಾನ್ ರಾಯಲ್ಸ್ ನೀಡಿದ್ದ 217 ರನ್ ಗುರಿಯ ಬೆನ್ನತ್ತಿದ ಸಿ.ಎಸ್.ಕೆ. 16 ರನ್ ಗಳಿಂದ ಸೋಲು ಅನುಭವಿಸಿತು.
ಗುರಿ ತಲುಪಲು 38 ರನ್ ಬೇಕಿತ್ತು. 7ನೇ ಕ್ರಮಾಂಕಿತನಾಗಿ ಕ್ರೀಸ್ ಗೆ ಬಂದ ಧೋನಿ ಆರಂಭದಲ್ಲಿ 12 ಬಾಲ್ ಗೆ 9 ರನ್ ಪೇರಿಸಿದ್ದಲ್ಲದೆ, ಅಂತ್ಯಾಟದಲ್ಲಿ 17 ಬಾಲ್ ಗೆ 29 ರನ್ ಕಲೆ ಹಾಕಿದ್ದರು. ಟಾಮ್ ಕುರನ್ ಬೌಲಿಂಗ್ ವೇಳೆ 3 ಸಿಕ್ಸ್ ಸಿಡಿಸಿದ್ದರು.
ಇದೆಲ್ಲವನ್ನೂ ಇಟ್ಟುಕೊಂಡು ಟ್ವೀಟ್ ಮಾಡಿರುವ ಗಂಭೀರ್, ಕಡೆಯ ಓವರ್ ನಲ್ಲಿ ಧೋನಿ ಸಿಡಿಸಿದ 3 ಸಿಕ್ಸ್ ಗಳ ಬಗ್ಗೆ ನೀವು ಮಾತನಾಡಬಹುದು. ಆದರೆ, ಅದರಿಂದ ಯಾವುದೇ ಪ್ರಯೋಜನ ಆಗಲಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅದು ಧೋನಿಯ ವೈಯಕ್ತಿಕ ಸ್ಕೋರ್ ಆಯಿತೇ ಹೊರತು ಮತ್ತೇನೂ ಅಲ್ಲ ಎಂದಿದ್ದರು. ಇದರಿಂದ ಕೆಂಡಾಮಂಡಲರಾಗಿರುವ ಧೋನಿ ಬಾಯ್ಸ್ ಗಂಭೀರ್ ವಿರುದ್ಧ ಟ್ವಿಟ್ಟರ್ ನಲ್ಲಿ ಟೀಕಾಸ್ತ್ರಗಳನ್ನು ಪ್ರಯೋಗಿಸಿದ್ದಾರೆ.
https://twitter.com/HitmanCricket/status/1308649678158741505?ref_src=twsrc%5Etfw%7Ctwcamp%5Etweetembed%7Ctwterm%5E1308649678158741505%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fkangana-of-cricket-dhoni-fans-hit-back-at-gambhir-for-slamming-csk-captain-over-batting-position-2901231.html