ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಮೈದಾನಕ್ಕಿಳಿಯುತ್ತಿದ್ದಂತೆ ವಿಶಿಷ್ಟ ದಾಖಲೆ ಬರೆದಿದ್ದಾರೆ. ಹೊರಗೆ 17 ಟೆಸ್ಟ್ ಪಂದ್ಯಗಳನ್ನು ಆಡಿದ ನಂತರ ಭಾರತದಲ್ಲಿ ಬುಮ್ರಾ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದಾರೆ. ಜಾವಗಲ್ ಶ್ರೀನಾಥ್ ಮತ್ತು ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ವಿದೇಶದಲ್ಲಿ ಹೆಚ್ಚು ಟೆಸ್ಟ್ ಆಡಿದ ನಂತರ ಭಾರತದಲ್ಲಿ ಮೊದಲ ಟೆಸ್ಟ್ ಆಡಿದ ಆಟಗಾರರ ಪಟ್ಟಿಯಲ್ಲಿ ಬುಮ್ರಾ ಮೊದಲ ಸ್ಥಾನದಲ್ಲಿದ್ದಾರೆ.
ಭಾರತದ ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಮತ್ತು ಅನುಭವಿ ಬ್ಯಾಟ್ಸ್ ಮನ್ ಸಚಿನ್ ತೆಂಡೂಲ್ಕರ್ ಅವರನ್ನು ಬುಮ್ರಾ ಹಿಂದಿಕ್ಕಿದ್ದಾರೆ. ಶ್ರೀನಾಥ್ ವಿದೇಶದಲ್ಲಿ 12 ಟೆಸ್ಟ್ ಆಡಿದ ನಂತರ ಭಾರತದಲ್ಲಿ ತಮ್ಮ ಮೊದಲ ಟೆಸ್ಟ್ ಆಡಿದ್ದರು. ಶ್ರೀನಾಥ್ ನಂತರ ಮಾಜಿ ವೇಗದ ಬೌಲರ್ ಆರ್.ಪಿ.ಸಿಂಗ್ 11 ಟೆಸ್ಟ್ ನಂತರ ಭಾರತದಲ್ಲಿ ಟೆಸ್ಟ್ ಆಡಿದ್ದರು. ಸಚಿನ್ ತೆಂಡೂಲ್ಕರ್ ವಿದೇಶದಲ್ಲಿ 10 ಟೆಸ್ಟ್ ಗಳನ್ನು ಆಡಿದ ನಂತರ ಭಾರತೀಯ ನೆಲದಲ್ಲಿ ಟೆಸ್ಟ್ ಆಡಿದ್ದರು.
ಟೀಂ ಇಂಡಿಯಾದಲ್ಲೂ ಚರ್ಚೆಯಾಗಿತ್ತಂತೆ ರೈತರ ಹೋರಾಟ
ಪ್ರಸ್ತುತ, ಜಸ್ಪ್ರೀತ್ ಬುಮ್ರಾ ವಿಶ್ವದ ಅತ್ಯುತ್ತಮ ಬೌಲರ್ ಗಳಲ್ಲಿ ಒಬ್ಬರಾಗಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಬುಮ್ರಾ ದಾಖಲೆ ಅದ್ಭುತವಾಗಿವೆ. ಬುಮ್ರಾ 17 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 79 ವಿಕೆಟ್ಗಳನ್ನು ಪಡೆದಿದ್ದಾರೆ. ಬುಮ್ರಾ 2018 ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು. ಮೂರು ವರ್ಷಗಳ ನಂತರ ಬುಮ್ರಾ ಭಾರತದಲ್ಲಿ ಟೆಸ್ಟ್ ಪಂದ್ಯವನ್ನು ಆಡಿದ್ದಾರೆ.