ನವದೆಹಲಿ: ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ಕೈಗೊಂಡಿರುವ ಹೋರಾಟಕ್ಕೆ ಡಬ್ಲ್ಯೂಡಬ್ಲ್ಯೂಇ ಮಾಜಿ ಚಾಂಪಿಯನ್ ದಿ ಗ್ರೇಟ್ ಕಲಿ(ದಲಿಪ್ ಸಿಂಗ್ ರಾಣಾ) ಕೈಜೋಡಿಸಿದ್ದಾರೆ.
ಪಂಜಾಬ್ ಮೂಲದ ಖಲಿ ಅವರು ದೆಹಲಿ ಗಡಿಭಾಗದಲ್ಲಿ ರೈತರು ಕೈಗೊಂಡಿರುವ ಹೋರಾಟಕ್ಕೆ ದೇಶದ ಜನ ಬೆಂಬಲಿಸಬೇಕೆಂದು ಮನವಿ ಮಾಡಿದ್ದಾರೆ.
ಪ್ರತಿಭಟನೆಯಲ್ಲಿ ಸ್ವತಃ ಭಾಗಿಯಾಗಿದ್ದ ಅವರು ಕೃಷಿಗೆ ಮಾರಕವಾದ ಕಾನೂನುಗಳನ್ನು ರದ್ದುಪಡಿಸಬೇಕೆಂದು ರೈತರು ಹೋರಾಟ ಕೈಗೊಂಡಿದ್ದಾರೆ. ಇಂತಹ ಕಾನೂನುಗಳನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ಹೇಳಿದ್ದಾರೆ.
ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸದ ಹೊರತು ಹೋರಾಟ ಹಿಂಪಡೆಯುವುದಿಲ್ಲ. ಸತತ 8ನೇ ದಿನವೂ ದೆಹಲಿಯ ವಿವಿಧ ಗಡಿಭಾಗದಲ್ಲಿ ಪಂಜಾಬ್, ಹರಿಯಾಣ ಸೇರಿದಂತೆ ದೇಶದ ವಿವಿಧೆಡೆಯಿಂದ ಆಗಮಿಸಿದ್ದ ರೈತರು ದೆಹಲಿ ಚಲೋ ಹೋರಾಟ ಕೈಗೊಂಡಿದ್ದಾರೆ. ಆದರೆ, ರೈತರ ಹೋರಾಟಕ್ಕೆ ತಡೆ ನೀಡಲಾಗಿದೆ. ಜಲಫಿರಂಗಿ, ಲಾಠಿಚಾರ್ಜ್, ಅಶ್ರುವಾಯು ಸಿಡಿಸುವ ಮೂಲಕ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಲಾಗಿದೆ. ಮಾತುಕತೆಗೆ ಕರೆದು ಷರತ್ತು ಹಾಕಲಾಗಿದ್ದು, ಸರ್ಕಾರದ ನಡೆಗೆ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇಂದು ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.