ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಫಾಪ್ ಡು ಪ್ಲೆಸಿಸ್, ಭಾರತೀಯ ಯುವ ಆಟಗಾರ ಋತುರಾಜ್ ಗಾಯಕ್ವಾಡರನ್ನ ‘ಯುವ ವಿರಾಟ್ ಕೊಹ್ಲಿ’ ಅಂತಾ ಕರೆದಿದ್ದಾರೆ. ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ 62 ರನ್ ಬಾರಿಸುವ ಮೂಲಕ ಋತುರಾಜ್ ಗೆಲುವನ್ನ ತಂದುಕೊಟ್ಟರು .
ಪಂಜಾಬ್ ವಿರುದ್ಧ 62 ರನ್ ಸಿಡಿಸಿದ ಗಾಯಕ್ವಾಡ್ 6 ಬೌಂಡರಿ ಹಾಗೂ ಒಂದು ಸಿಕ್ಸ್ ಬಾರಿಸಿದ್ರು. 23 ವರ್ಷದ ಮಹಾರಾಷ್ಟ್ರ ಆಟಗಾರನ ಈ ಬ್ಯಾಟಿಂಗ್ ಶೈಲಿ ನೋಡಿದ ಡು ಪ್ಲೆಸಿಸ್ ಈತ ಯುವ ವಿರಾಟ್ ಕೊಹ್ಲಿ ಅಲ್ವಾ ಅಂತಾ ಹೇಳಿದ್ದಾರೆ.
ಗಾಯಕ್ವಾಡ್ ತಮ್ಮ ಐಪಿಎಲ್ ಆವೃತ್ತಿಯಲ್ಲಿ ಉತ್ತಮ ಆರಂಭವನ್ನೇನೂ ಪಡೆದುಕೊಂಡಿಲ್ಲ. ಮೊದಲ ಮೂರು ಇನ್ನಿಂಗ್ಸ್ಗಳಲ್ಲಿ ಗಾಯಕ್ವಾಡ್ ಎರಡಲ್ಲಿ ಸೊನ್ನೆಗೆ ಔಟ್ ಆದರೆ ಒಂದು ಮ್ಯಾಚ್ನಲ್ಲಿ 5 ರನ್ ಸೇರಿಸಲಷ್ಟೇ ಯಶಸ್ವಿಯಾಗಿದ್ರು. ಆದರೆ ಯಾವಾಗ ಚೆನ್ನೈ ತಂಡ ಗಾಯಕ್ವಾಡಗೆ ಓಪನರ್ ಆಗಿ ಅವಕಾಶ ನೀಡಿತೋ ಅಂದಿನಿಂದ ಈ ಬಲಗೈ ಆಟಗಾರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಮೂರು ಮ್ಯಾಚ್ಗಳಲ್ಲೂ ಉತ್ತಮ ಪ್ರದರ್ಶನ ತೋರಿರುವ ಯುವ ಆಟಗಾರ ಹ್ಯಾಟ್ರಿಕ್ ಅರ್ಧ ಶತಕ ಬಾರಿಸಿದ್ದಾರೆ.