ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2022 ರ ಮೆಗಾ ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರರಲ್ಲಿ ಒಬ್ಬರಾಗುವ ನಿರೀಕ್ಷೆಯಿದ್ದ ಭಾರತೀಯ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ಇಶಾನ್ ಕಿಶನ್ ಐಪಿಎಲ್ ಹರಾಜು ಇತಿಹಾಸದಲ್ಲೇ 2ನೇ ದುಬಾರಿ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಈ ಯುವ ಆಟಗಾರನಿಗೆ ತೀವ್ರ ಬಿಡ್ಡಿಂಗ್ ವಾರ್ ಇದ್ದ ಕಾರಣ ಈ ಹಿಂದೆ ಹರಾಜಿನ ಸಮಯದಲ್ಲಿ 10 ಕೋಟಿಗಿಂತ ಹೆಚ್ಚು ಖರ್ಚು ಮಾಡದ MI ಕಿಶನ್ ಗಾಗಿ ಮೊದಲ ಬಾರಿಗೆ ತಮ್ಮ ತಂತ್ರ ಬದಲಾಯಿಸಿ ಅವರನ್ನು 15.25 ಕೋಟಿ ರೂಪಾಯಿಗಳಿಗೆ ಮರಳಿ ಖರೀದಿಸಿದೆ.
ಪಂಜಾಬ್ ಕಿಂಗ್ಸ್(PBKS) ಮತ್ತು ಮುಂಬೈ ಇಂಡಿಯನ್ಸ್(MI) ಹರಾಜು ವಾರ್ ನಲ್ಲಿ ತೊಡಗಿಸಿಕೊಂಡಿದ್ದರೆ, PBKS ಹಿಂದೆಗೆದುಕೊಂಡ ನಂತರ ಸನ್ ರೈಸರ್ಸ್ ಹೈದರಾಬಾದ್(SRH) ಬಿಡ್ಡಿಂಗ್ ಗೆ ಸೇರಿಕೊಂಡಿತು. ಕಿಶನ್ ನಂತಹ ಪ್ರತಿಭಾವಂತ ಆಟಗಾರನನ್ನು ಬಿಡಲು ನಿರಾಕರಿಸಿದ MI ಅಂತಿಮವಾಗಿ ಬಿಡ್ ಗೆದ್ದುಕೊಂಡಿತು, ಐಪಿಎಲ್ ಹರಾಜಿನ ಇತಿಹಾಸದಲ್ಲಿ ಕಿಶನ್ ಎರಡನೇ ಅತ್ಯಂತ ದುಬಾರಿ ಭಾರತೀಯ ಆಟಗಾರನಾಗಿದ್ದಾರೆ.
ಕಿಶನ್ ಐದು ಬಾರಿ ಐಪಿಎಲ್ ಚಾಂಪಿಯನ್ ಗಳೊಂದಿಗೆ ಮರುಮಿಲನದಿಂದ ಸಂತೋಷಗೊಂಡಿದ್ದಾರೆ. ಈ ವಿಡಿಯೊವನ್ನು MI ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.
“ಎಲ್ಲರಿಗೂ ನಮಸ್ಕಾರ, MI ಯೊಂದಿಗೆ ಹಿಂತಿರುಗಲು ನಿಜವಾಗಿಯೂ ಉತ್ಸುಕನಾಗಿದ್ದೇನೆ. ಎಲ್ಲರೂ ನನ್ನನ್ನು ಅಲ್ಲಿ ಕುಟುಂಬದಂತೆ ನಡೆಸಿಕೊಂಡಿದ್ದಾರೆ. ನಾನು ಅಲ್ಲಿರುವುದಕ್ಕೆ ನಿಜವಾಗಿಯೂ ಸಂತೋಷವಾಗಿದೆ. ನಾನು ನನ್ನ ತಂಡಕ್ಕೆ ಸೇರಿದಾಗ ಅತ್ಯುತ್ತಮವಾದ ಪ್ರದರ್ಶನ ನೀಡುತ್ತೇನೆ ಎಂದು ಭಾವಿಸುವುದಾಗಿ ಹೇಳಿದ್ದಾರೆ.
ಐಪಿಎಲ್ 2008 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್(ಡಿಸಿ) 16 ಕೋಟಿಗೆ ಖರೀದಿಸಿದ ಯುವರಾಜ್ ಸಿಂಗ್ ಅವರು ಐಪಿಎಲ್ ಹರಾಜು ಇತಿಹಾಸದಲ್ಲಿ ಅತ್ಯಂತ ದುಬಾರಿ ಭಾರತೀಯ ಆಟಗಾರರಾಗಿದ್ದಾರೆ.
ಕಿಶನ್ಗಿಂತ ಮೊದಲು, ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಶ್ರೇಯಸ್ ಅಯ್ಯರ್ ಅವರು ಐಪಿಎಲ್ ಮೆಗಾ ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರರಾಗಿದ್ದರು, ಏಕೆಂದರೆ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್(ಕೆಕೆಆರ್) 12.25 ಕೋಟಿಗೆ ಖರೀದಿಸಿತು.