ಪಾಟ್ನಾ: ಕ್ರಿಕೆಟ್ ಜೂಜಿನಲ್ಲಿ ಸಲೂನ್ ಮಾಲೀಕರೊಬ್ಬರಿಗೆ ಒಂದು ಕೋಟಿ ರೂಪಾಯಿ ಬಂದಿದೆ. ಬಿಹಾರದ ಮಧುಬಾನಿ ಜಿಲ್ಲೆಯ ಅಶೋಕ್ ಕುಮಾರ್ ಕ್ರೀಡಾ ಆಪ್ ಒಂದರಲ್ಲಿ ಕ್ರಿಕೆಟ್ ಜೂಜು ಆಡಿದ್ದು, ಬಹುಮಾನ ಬಂದ ಬಳಿಕ ಕೋಟ್ಯಧಿಪತಿಯಾಗಿದ್ದಾರೆ.
ಕಳೆದ ಭಾನುವಾರ ಕೊಲ್ಕತ್ತಾ ಮತ್ತು ಚೆನ್ನೈ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರನ್ನು ಆಯ್ಕೆ ಮಾಡಿದ್ದರು. ಇದಕ್ಕಾಗಿ ಆಪ್ ನಲ್ಲಿ 50 ರೂ. ಶುಲ್ಕ ಕಟ್ಟಿದ್ದರು. ಅವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ಬಂದಿದೆ.
ಬಹುಮಾನ ಗೆದ್ದ ಖುಷಿಯಲ್ಲಿ ನನಗೆ ನಿದ್ದೆಯೇ ಬರಲಿಲ್ಲ ಎಂದು ಅಶೋಕ್ ಕುಮಾರ್ ಹೇಳಿದ್ದು, ಇದೇ ವೃತ್ತಿಯಲ್ಲಿ ಮುಂದುವರೆಯಲಿದ್ದೇನೆ ಎಂದು ತಿಳಿಸಿದ್ದಾರೆ.
ಮೊಬೈಲ್ ಆಪ್ ನಿಂದ ಡ್ರೀಮ್ ಇಲೆವೆನ್ ಆಯ್ಕೆ ಮಾಡುವ ಮೂಲಕ ಬಹುಮಾನಗಳನ್ನು ಗೆಲ್ಲುವ ಅವಕಾಶ ಸಿಕ್ಕಿದೆ ಎಂದು ಜಂಜಾರಪುರ ಮಧುಬಾನಿ ಅರಾತಾದಿ ಬ್ಲಾಕ್ ನ ನಾನೂರ್ ಚೌಕ್ ನಲ್ಲಿ ಸಲೂನ್ ಶಾಪ್ ನಡೆಸುತ್ತಿರುವ ಅರಾರಿಯಾ ಸಂಗ್ರಾಮದ ನಿವಾಸಿ ಅಶೋಕ್ ಹೇಳಿದ್ದಾರೆ.
ಈ ಬಹುಮಾನದಲ್ಲಿ ಅವರು ಶೇಕಡ 30 ರಷ್ಟು ಕಡಿತಗೊಳಿಸಿದ ನಂತರ ಒಟ್ಟು 70 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ.