
ದುಬೈ: ಕೊರೋನಾ ಕಾರಣದಿಂದಾಗಿ ದುಬೈಗೆ ಸ್ಥಳಾಂತರಗೊಂಡಿರುವ ಐಪಿಎಲ್ ಎರಡನೇ ಇನಿಂಗ್ಸ್ ಇಂದಿನಿಂದ ಆರಂಭವಾಗಲಿದೆ.
ಕ್ರಿಕೆಟ್ ಲೋಕದ ವರ್ಣರಂಜಿತ ಟೂರ್ನಿ ಎಂದೇ ಹೇಳಲಾಗಿರುವ ಐಪಿಎಲ್ 14 ನೇ ಆವೃತ್ತಿಯ ಎರಡನೇ ಚರಣಕ್ಕೆ ಇಂದು ಸಂಜೆ ಚಾಲನೆ ಸಿಗಲಿದೆ. ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ನಾಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೆಕೆಆರ್ ನಡುವೆ ಅಬುದಾಬಿಯಲ್ಲಿ ಪಂದ್ಯ ನಡೆಯಲಿದೆ.
2021 ರ ಐಪಿಎಲ್ ಅಂಕಪಟ್ಟಿಯಲ್ಲಿ ಡೆಲ್ಲಿ 12 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಚೆನ್ನೈ ಮತ್ತು ಬೆಂಗಳೂರು ತಂಡಗಳು ತಲಾ 10 ಅಂಕಗಳೊಂದಿಗೆ ಕ್ರಮವಾಗಿ 2 ಮತ್ತು 3 ನೇ ಸ್ಥಾನದಲ್ಲಿವೆ. ಮೈದಾನಕ್ಕೆ ಶೇಕಡ 50 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆ.