ಐಪಿಎಲ್ 14ನೇ ಆವೃತ್ತಿಗೆ ಇಂದು ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಎಂಟು ತಂಡಗಳು ತಮ್ಮ ಆಟಗಾರರನ್ನು ಖರೀದಿ ಮಾಡುತ್ತಿವೆ.
ಕೆಲವೊಬ್ಬ ಸ್ಟಾರ್ ಆಟಗಾರರು ಊಹಿಸಲಾಗದ ಬೆಲೆಗೆ ಬಿಕರಿಯಾಗಿದ್ದು, ಮತ್ತೆ ಕೆಲ ಆಟಗಾರರನ್ನು ಅವರ ಮೂಲ ಬೆಲೆಗೂ ಸಹ ಪ್ರಾಂಚೈಸಿಗಳು ಖರೀದಿಸಿಲ್ಲ.
ಇದರ ಮಧ್ಯೆ ಅಚ್ಚರಿ ಎಂಬಂತೆ ಇದೇ ಮೊದಲ ಬಾರಿಗೆ ಐಪಿಎಲ್ ಗೆ ಎಂಟ್ರಿ ಪಡೆದುಕೊಂಡಿರುವ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ತಮ್ಮ ಮೂಲ ಬೆಲೆಯಾದ 20 ಲಕ್ಷ ರೂಪಾಯಿಗಳಿಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಬಿಕರಿಯಾಗಿದ್ದಾರೆ.