ಇಸ್ತಾನ್ ಬುಲ್ ನಲ್ಲಿ ಐಪಿಎಲ್ ಹರಾಜು ನಡೆಸುವ ಯೋಜನೆಯೂ ಇಲ್ಲ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಹೇಳಿದ್ದಾರೆ.
2023 ರ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ. ಡಿಸೆಂಬರ್‌ನಲ್ಲಿ ಟೂರ್ನಿ ನಡೆಸುವ ಬಗ್ಗೆ ಚಿಂತನೆ ನಡೆದಿದ್ದು, ಒಂದೆರಡು ದಿನಗಳಿಂದ ಬೆಂಗಳೂರಿನ ಬದಲು ಇಸ್ತಾನ್ ಬುಲ್ ಐಪಿಎಲ್ ಹರಾಜು ಸಮಾರಂಭ ನಡೆಸಲು ಯೋಜಿಸಲಾಗಿದೆ ಎಂಬ ವದಂತಿ ಹರಿದಾಡಿವೆ.
ಟರ್ಕಿಯ ರಾಜಧಾನಿ ಇಸ್ತಾನ್ ಬುಲ್ ನಲ್ಲಿ ಐಪಿಎಲ್ ಹರಾಜು ನಡೆಸುವ ವರದಿಗಳನ್ನು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ತಳ್ಳಿಹಾಕಿದ್ದು, ಇಸ್ತಾನ್ ಬುಲ್ ಹರಾಜು ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಮಾಹಿತಿಯ ಮೂಲ ಏನು ಎಂದು ನನಗೆ ತಿಳಿದಿಲ್ಲ. ಇದು ಸಂಪೂರ್ಣವಾಗಿ ಅಸಂಬದ್ಧವಾಗಿದೆ. ಮುಂದಿನ ಘಟನೆ ನಡೆಯುವ ದಿನಾಂಕಗಳನ್ನು ನಾವು ಇದೀಗ ಚರ್ಚಿಸುತ್ತಿದ್ದೇವೆ. ಸ್ಥಳವನ್ನು ಸಹ ಚರ್ಚಿಸಲಾಗಿಲ್ಲ. ಇಸ್ತಾನ್ ಬುಲ್ ನಲ್ಲಿ ನಡೆಯಲ್ಲ ಎಂದು ಹೇಳಿದ್ದಾರೆ.
ಭಾರತ ಮತ್ತು ಇಸ್ತಾನ್ ಬುಲ್ ನಡುವಿನ ದ್ವಿಪಕ್ಷೀಯ ಸಂಬಂಧಗಳು ಇತ್ತೀಚೆಗೆ ಉತ್ತಮ ಸ್ಥಿತಿಯಲ್ಲಿಲ್ಲ ಎಂಬುದನ್ನು ಗಮನಿಸಬೇಕಿದೆ.