ಮುಂಬೈ: ಇಲ್ಲಿನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 15 ಆವೃತ್ತಿಯ 6 ನೇ ಪಂದ್ಯದಲ್ಲಿ ಕೋಲ್ಕೊತಾ ನೈಟ್ ರೈಡರ್ಸ್ ವಿರುದ್ಧ ಆರ್.ಸಿ.ಬಿ. 3 ವಿಕೆಟ್ ಗಳ ಅಂತರದಿಂದ ಜಯಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕೋಲ್ಕೊತಾ 18.5 ಓವರುಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 128 ರನ್ ಗಳಿಸಿತು. ವೆಂಕಟೇಶ್ ಅಯ್ಯರ್ 10, ಶ್ರೇಯಸ್ ಐಯರ್ 13, ನಿತೀಶ್ ರಾಣಾ 10, ಸುನಿಲ್ ನರೈನ್ 12, ಸ್ಯಾಮ್ ಬಿಲಿಂಗ್ಸ್ 14, ಆಂಡ್ರೆ ರಸೆಲ್ 25 ರನ್ ಗಳಿಸಿದರು. ಆರ್.ಸಿ.ಬಿ. ಪರವಾಗಿ ವನಿಂದು ಹಸರಂಗ 4, ಆಕಾಶ್ ದೀಪ್ 3, ಹರ್ಷಲ್ ಪಟೇಲ್ 2, ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದರು.
129 ಗೆಲುವಿನ ಗುರಿ ಬೆನ್ನತ್ತಿದ ಆರ್.ಸಿ.ಬಿ. 19.2 ಓವರ್ ಗಳಲ್ಲಿ 7 ವಿಕೆಟ್ ಗೆ 132 ರನ್ ಗಳಿಸಿತು. ವಿರಾಟ್ ಕೊಹ್ಲಿ 12, ಡೇವಿಡ್ ವಿಲ್ಲಿ 18, ಶೆರ್ಫಾನ್ 28, ಶಹಬಾಜ್ 27, ದಿನೇಶ್ ಕಾರ್ತಿಕ್ ಅಜೇಯ 14 ರನ್ ಗಳಿಸಿದರು. ಕೆಕೆಆರ್ ಪರ ುಮೇಶ್ ಯಾದವ್ 2, ಟಿಮ್ ಸೌಥಿ 3 ವಿಕೆಟ್ ಪಡೆದರು.