ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2022 ರ ಮೆಗಾ ಹರಾಜಿನ 2 ನೇ ದಿನದಂದು ಇಂಗ್ಲೆಂಡ್ ಆಟಗಾರ ಮತ್ತು ರಾಜಸ್ಥಾನ್ ರಾಯಲ್ಸ್ ಮಾಜಿ ಆಲ್ ರೌಂಡರ್ ಲಿಯಾಮ್ ಲಿವಿಂಗ್ ಸ್ಟೋನ್ ಅವರನ್ನು ಪಂಜಾಬ್ ಕಿಂಗ್ಸ್ ಆಯ್ಕೆ ಮಾಡಿದೆ.
ಲಿವಿಂಗ್‌ಸ್ಟೋನ್ ಆಲ್ ರೌಂಡರ್‌ಗಳ ಸೆಟ್ 2 ರಲ್ಲಿ ಮೊದಲ ಆಟಗಾರರಾಗಿದ್ದರು. ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್(ಕೆಕೆಆರ್) ನೊಂದಿಗೆ ಬಿಡ್ ಗಳನ್ನು ಆಕರ್ಷಿಸಿದರು.
ಸನ್ ರೈಸರ್ಸ್ ಹೈದರಾಬಾದ್(SRH) ತಡವಾಗಿ ಪ್ರವೇಶಿಸಿತು. ಆದರೆ ಪಂಜಾಬ್ ಕಿಂಗ್ಸ್ ಅಂತಿಮವಾಗಿ 11.50 ಕೋಟಿ ರೂ. ಗೆ ಲಿವಿಂಗ್ ಸ್ಟೋನ್ ರನ್ನು ಪಡೆದುಕೊಂಡಿತು. ಇಂಗ್ಲೆಂಡ್ ಕ್ರಿಕೆಟಿಗರಲ್ಲಿ, ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್‌ಗೆ(2017) ಬೆನ್ ಸ್ಟೋಕ್ಸ್ 14.5 ಕೋಟಿ ರಾಜಸ್ಥಾನ ರಾಯಲ್ಸ್‌ಗೆ (2018) ಸ್ಟೋಕ್ಸ್ 12.5 ಕೋಟಿ ರೂ.,ಮತ್ತು ಆರ್‌ಸಿಬಿಗೆ(2017) ಟೈಮಲ್ ಮಿಲ್ಸ್ 12 ಕೋಟಿ ರೂ.,ನಂತರ ಲಿವಿಂಗ್‌ಸ್ಟೋನ್ ನಾಲ್ಕನೇ ಸ್ಥಾನದಲ್ಲಿದ್ದಾರೆ.