ನವದೆಹಲಿ: ಪ್ರಸಕ್ತ ವರ್ಷದ ಐಪಿಎಲ್ ಟೂರ್ನಿ ಭಾರತದಲ್ಲೇ ಆಯೋಜಿಸಲಾಗುತ್ತದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದು, ಜನಸಂದಣಿಯಿಲ್ಲದೇ ಐಪಿಎಲ್ ಟೂರ್ನಿ ಆಯೋಜಿಸುವ ಕುರಿತು ಚರ್ಚೆ ನಡೆಸಿದೆ.
ಕೊರೊನಾ ಸೋಂಕು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ವಿದೇಶದಲ್ಲಿ ಐಪಿಎಲ್ ಟೂರ್ನಿ ನಡೆಸಲಾಗಿತ್ತು. ಅದಕ್ಕಿಂತ ಹಿಂದೆ ಚುನಾವಣೆಯ ಸಂದರ್ಭದಲ್ಲಿ ವಿದೇಶದಲ್ಲಿ ಟೂರ್ನಿ ನಡೆಸಲಾಗಿತ್ತು. ಈ ಬಾರಿ ಭಾರತದಲ್ಲಿಯೆ ಐಪಿಎಲ್ ಟೂರ್ನಿ ಭಾರತದಲ್ಲೇ ನಡೆಸಲು ಚಿಂತನೆ ನಡೆಸಲಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಉನ್ನತ ಅಧಿಕಾರಿಗಳು, ಇಂಡಿಯನ್ ಪ್ರೀಮಿಯರ್ ಲೀಗ್ ಆಡಳಿತ ಮಂಡಳಿ ಸದಸ್ಯರು ಮತ್ತು ಫ್ರಾಂಚೈಸಿ ಮಾಲೀಕರು ಮುಂಬರುವ ಐಪಿಎಲ್ ಆವೃತ್ತಿಯ ಸ್ಥಳವನ್ನು ಚರ್ಚಿಸಿದ್ದಾರೆ. ಭಾರತದಲ್ಲಿ IPL 2022 ಅನ್ನು ಆಯೋಜಿಸುವ ವಿಶ್ವಾಸವನ್ನು BCCI ಹೊಂದಿದೆ.
ಏತನ್ಮಧ್ಯೆ, ಐಪಿಎಲ್ 2022 ಮಾರ್ಚ್ 27 ರಿಂದ ಪ್ರಾರಂಭವಾಗಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಬ್ರಿಜೇಶ್ ಪಟೇಲ್ ಹೇಳಿದ್ದಾರೆ.
ಐಪಿಎಲ್ 2022 ಅನ್ನು ಭಾರತದಿಂದ ಹೊರಗೆ ಸ್ಥಳಾಂತರಿಸಬೇಕಾದರೆ ಫ್ರ್ಯಾಂಚೈಸ್ ಮಾಲೀಕರು ಯುಎಇ ಅಥವಾ ದಕ್ಷಿಣ ಆಫ್ರಿಕಾವನ್ನು ಪರ್ಯಾಯ ಸ್ಥಳವಾಗಿ ಬಯಸುತ್ತಾರೆ. BCCI ಶ್ರೀಲಂಕಾವನ್ನು ಸಂಭಾವ್ಯ ಪರ್ಯಾಯ ಸ್ಥಳವಾಗಿ ನೋಡುತ್ತಿದೆ ಎನ್ನಲಾಗಿದೆ.