ಸಿ.ಎಸ್.ಕೆ. ಕ್ಯಾಪ್ಟನ್ ಎಂ.ಎಸ್. ಧೋನಿ ಬ್ಯಾಟಿಂಗ್ ಗೆ ಹೋಗುವ ಮೊದಲು ಬ್ಯಾಟ್ ತಿನ್ನಲು ಕಾರಣವೇನೆಂಬುದನ್ನು ಮಾಜಿ ಕ್ರಿಕೆಟಿಗ ಅಮಿತ್ ಮಿಶ್ರಾ ಬಹಿರಂಗಪಡಿಸಿದ್ದಾರೆ.
ಭಾನುವಾರ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಬ್ಯಾಟಿಂಗ್ ಗೆ ತೆರಳುವ ಮೊದಲು ಧೋನಿ ತನ್ನ ಬ್ಯಾಟ್ ಅನ್ನು ತಿನ್ನುವುದು ಅಥವಾ ಅಗಿಯುವುದು ಕಂಡುಬಂದಿದೆ. ಇದು ಅನೇಕರನ್ನು ಆಶ್ಚರ್ಯಗೊಳಿಸಿದೆ. ಭಾರತದ ಮಾಜಿ ಕ್ರಿಕೆಟಿಗ ತಮ್ಮ ವೃತ್ತಿಜೀವನದುದ್ದಕ್ಕೂ ಹಲವು ಬಾರಿ ಧೋನಿಯೊಂದಿಗೆ ಡ್ರೆಸ್ಸಿಂಗ್ ರೂಮ್ ನಲ್ಲಿ ಕಳೆದ ಅಮಿತ್ ಮಿಶ್ರಾ ಅದರ ಹಿಂದಿನ ವಿಚಿತ್ರ ಕಾರಣವನ್ನು ಬಹಿರಂಗಪಡಿಸಿದ್ದಾರೆ.
ಟೇಪ್ ತೆಗೆದು ತನ್ನ ಬ್ಯಾಟ್ ಅನ್ನು ಸ್ವಚ್ಛವಾಗಿಡಲು ಧೋನಿ ಹಾಗೆ ಮಾಡುತ್ತಾರೆ ಎಂದು ಮಿಶ್ರಾ ಬಹಿರಂಗಪಡಿಸಿದ್ದಾರೆ.
ಒಂದು ವೇಳೆ ಧೋನಿ ಆಗಾಗ್ಗೆ ಅವರ ಬ್ಯಾಟ್ ಅನ್ನು ಏಕೆ ತಿನ್ನುತ್ತಾರೆ ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ. ಅವರು ತನ್ನ ಬ್ಯಾಟ್ ಸ್ವಚ್ಛವಾಗಿರಲು ಇಷ್ಟಪಡುವ ಕಾರಣ ಬ್ಯಾಟ್ ನ ಟೇಪ್ ಅನ್ನು ತೆಗೆದುಹಾಕಲು ಹಾಗೆ ಮಾಡುತ್ತಾರೆ. MS ರ ಬ್ಯಾಟ್ನಿಂದ ಒಂದೇ ಒಂದು ತುಂಡು ಟೇಪ್ ಅಥವಾ ಥ್ರೆಡ್ ಹೊರಬರುವುದನ್ನು ನೀವು ನೋಡುವುದಿಲ್ಲ. ಎಂದು ಮಿಶ್ರಾ ಟ್ವೀಟ್ ಮಾಡಿದ್ದಾರೆ.