ಐಪಿಎಲ್ ಒಂದು ಚುಟುಕು ಕ್ರಿಕೆಟ್. ಮೈದಾನದಲ್ಲಿ ಅಬ್ಬರಿಸುವ ಆಟಗಾರರು ಗಮನ ಸೆಳೆಯುತ್ತಾರೆ. ಆದ್ರೆ ಈ ಐಪಿಎಲ್ ನಲ್ಲೂ ನಿಧಾನ ಗತಿಯಲ್ಲಿ ಶತಕ ಗಳಿಸಿದ ಆಟಗಾರರ ಸಂಖ್ಯೆ ಕಡಿಮೆಯೇನಿಲ್ಲ. ನಿಧಾನಗತಿ ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೂಡ ಇದ್ದಾರೆ.
ಐಪಿಎಲ್ ನಲ್ಲಿ ನಿಧಾನ ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಮನೀಶ್ ಪಾಂಡೆ ಮೊದಲ ಸ್ಥಾನದಲ್ಲಿದ್ದಾರೆ. ಮನೀಶ್, ಐಪಿಎಲ್ ನ ಎರಡನೇ ಋತುವಿನಲ್ಲಿ ಮೇ 21, 2009ರಲ್ಲಿ 67 ಬಾಲಿಗೆ ಶತಕ ಸಿಡಿಸಿದ್ದರು. ಬೆಂಗಳೂರು ಪರ ಆಡ್ತಿದ್ದ ಮನೀಶ್ ಪಾಂಡೆ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಶತಕ ಸಿಡಿಸಿದ್ದರು.
ಎರಡನೇ ಸ್ಥಾನದಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ಡೇವಿಡ್ ವಾರ್ನರ್ ಹೆಸರಿದೆ. ಏಪ್ರಿಲ್ 15,2011 ರಲ್ಲಿ ಸಚಿನ್ ತೆಂಡೂಲ್ಕರ್, 66 ಬಾಲಿಗೆ ಶತಕ ಸಿಡಿಸಿದ್ದರು. ವಾರ್ನರ್, ಮಾರ್ಚ್ 29, 2010ರಂದು 66 ಬಾಲಿಗೆ ಶತಕ ಸಿಡಿಸಿದ್ದರು. ಈ ಪಟ್ಟಿಯ ಮೂರನೇ ಸ್ಥಾನದಲ್ಲಿ ಕೆವಿನ್ ಪೀಟರ್ಸನ್ ಹೆಸರಿದೆ. ಏಪ್ರಿಲ್ 19, 2012ರಲ್ಲಿ ಪೀಟರ್ಸನ್ 64 ಬಾಲಿಗೆ ಶತಕ ಬಾರಿಸಿದ್ದರು.
ನಾಲ್ಕನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್. ರಾಹುಲ್ ಹೆಸರಿದೆ. ಕೊಹ್ಲಿ ಏಪ್ರಿಲ್ 24, 2016ರಂದು 63 ಬಾಲಿಗೆ ಶತಕ ಸಿಡಿಸಿದ್ದರೆ, ರಾಹುಲ್ ಏಪ್ರಿಲ್ 10, 2019ರಲ್ಲಿ 63 ಬಾಲಿಗೆ ಶತಕ ಸಿಡಿಸಿದ್ದರು. ಈ ಬಾರಿ ಯಾವ ಆಟಗಾರರು ನಿಧಾನ ಗತಿಯಲ್ಲಿ ಶತಕ ಸಿಡಿಸಲಿದ್ದಾರೆ ಎಂಬುದನ್ನು ನೋಡಬೇಕಿದೆ.