ಕೊರೊನಾ ವೈರಸ್ ಕಾರಣದಿಂದಾಗಿ ಐಪಿಎಲ್ ಪಂದ್ಯಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಉಳಿದ 31 ಪಂದ್ಯಗಳನ್ನು ಯುಎಇನಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿತ್ತು. ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗಿ ಅಕ್ಟೋಬರ್ 15ರವರೆಗೆ ಪಂದ್ಯ ನಡೆಸಲು ಬಿಸಿಸಿಐ ಮುಂದಾಗಿತ್ತು. ಆದ್ರೆ ಇದಕ್ಕೆ ಈಗ ಮತ್ತೆ ಅಡ್ಡಿ ಬರುವ ಸಾಧ್ಯತೆಯಿದೆ.
ಐಪಿಎಲ್‌ನ ಈ ವೇಳಾಪಟ್ಟಿಗೆ ಐಸಿಸಿ ಆಕ್ಷೇಪಣೆಗಳಿವೆ ಎನ್ನಲಾಗ್ತಿದೆ. ಅಕ್ಟೋಬರ್ 18 ರಿಂದ ಟಿ 20 ವಿಶ್ವಕಪ್ ಆಯೋಜಿಸಲು ಐಸಿಸಿ ಚಿಂತನೆ ನಡೆಸುತ್ತಿದೆ. ಐಪಿಎಲ್ 2021 ರ ಫೈನಲ್ ಅಕ್ಟೋಬರ್ 15 ರಂದು ನಡೆದರೆ, ಟಿ 20 ವಿಶ್ವಕಪ್ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆಯಿದೆ.
ಐಸಿಸಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡಲ್ಲಿ ಬಿಸಿಸಿಐಗೆ ಸಮಸ್ಯೆ ಎದುರಾಗಲಿದೆ. ಅಕ್ಟೋಬರ್ 10ರಂದು ಐಪಿಎಲ್ ಕೊನೆ ಪಂದ್ಯ ನಡೆಸುವಂತೆ ಬಿಸಿಸಿಐಗೆ, ಐಸಿಸಿ ನಿರ್ಧಾರ ಮಾಡಿದ್ರೂ ಐಪಿಎಲ್ ಪಂದ್ಯಕ್ಕೆ ತೊಂದರೆಯಾಗಲಿದೆ. ಪಂದ್ಯಾವಳಿ ಮುಗಿಸಲು 25 ದಿನಗಳ ಅವಧಿ ಬೇಕೆಂದು ಈಗಾಗಲೇ ಬಿಸಿಸಿಐ ಹೇಳಿದೆ.
ಟಿ-20 ವಿಶ್ವಕಪ್ ಬಗ್ಗೆ ಬಿಸಿಸಿಐ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಬಿಸಿಸಿಐ ಐಸಿಸಿಯಿಂದ ಸ್ವಲ್ಪ ಸಮಯ ಕೋರಿದೆ.