ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ವಿಶ್ವದ ಅತ್ಯಂತ ಪ್ರಸಿದ್ಧ ಆಟಗಾರರಲ್ಲಿ ಒಬ್ಬರು. ಧೋನಿ ಮೈದಾನದಲ್ಲಿ ಮಾತ್ರವಲ್ಲ ಮೈದಾನದ ಹೊರಗೂ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.
ಈಗ ಐಪಿಎಲ್ 2021ರ ಪಂದ್ಯಗಳು ರದ್ದಾಗ್ತಿದ್ದಂತೆ ಧೋನಿ ಮಾಡಿದ ಕೆಲಸ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದೆ.
ಐಪಿಎಲ್ ರದ್ದಾದ ನಂತ್ರ ವಿದೇಶಿ ಆಟಗಾರರನ್ನು ಮನೆಗೆ ತಲುಪಿಸುವ ಪ್ರಶ್ನೆ ಉದ್ಭವವಾಗಿತ್ತು. ಚಾರ್ಟರ್ಡ್ ವಿಮಾನಗಳ ಮೂಲಕ ಬಿಸಿಸಿಐ ಆಟಗಾರರನ್ನು ಮನೆಗೆ ತಲುಪಿಸುತ್ತಿದೆ. ಈ ಮಧ್ಯೆ ಸಿಎಸ್ಕೆ ನಾಯಕ ಧೋನಿ, ಎಲ್ಲ ಆಟಗಾರರು ಮನೆ ತಲುಪಿದ ನಂತ್ರ ತಾವು ಹೊಟೇಲ್ ಬಿಡುವುದಾಗಿ ಹೇಳಿದ್ದಾರೆ.
ಎಲ್ಲ ಆಟಗಾರರು ಸುರಕ್ಷಿತವಾಗಿ ಮನೆ ತಲುಪಬೇಕೆಂಬುದು ಧೋನಿ ಆಶಯ. ಮೊದಲು ವಿದೇಶಿ ಆಟಗಾರರು, ನಂತ್ರ ದೇಶಿ ಆಟಗಾರರು ಮನೆಗೆ ಹೋದ ಮೇಲೆ ಕೊನೆಯಲ್ಲಿ ತಾನು ಹೊಟೇಲ್ ಬಿಡ್ತೇನೆಂದು ಧೋನಿ ಹೇಳಿದ್ದಾರಂತೆ. ಸಿಎಸ್ಕೆ ಸದಸ್ಯರೊಬ್ಬರು ಧೋನಿ ನಿರ್ಧಾರವನ್ನು ತಿಳಿಸಿದ್ದಾರೆ. ವಿದೇಶಿ ಆಟಗಾರರು ಒಬ್ಬೊಬ್ಬರಾಗಿಯೇ ತವರಿಗೆ ಹೋಗ್ತಿದ್ದು, ಅಲ್ಲಿ ಕ್ವಾರಂಟೈನ್ ನಲ್ಲಿ ಇರಲಿದ್ದಾರೆ. ಆದ್ರೆ ಆಸ್ಟ್ರೇಲಿಯಾ ಆಟಗಾರರು ಕಾಯಬೇಕಿದೆ.
ಆಸ್ಟ್ರೇಲಿಯಾ ಸರ್ಕಾರ ಭಾರತದ ವಿಮಾನವನ್ನು ನಿರ್ಬಂಧಿಸಿದೆ. ಮೇ.15ರವರೆಗೆ ಆಸ್ಟ್ರೇಲಿಯಾ ನಿರ್ಬಂಧ ಹೇರಿದ್ದು, ಯಾವುದೇ ರಿಯಾಯಿತಿ ನೀಡುವುದಿಲ್ಲವೆಂದು ಪ್ರಧಾನಿ ಹೇಳಿದ್ದಾರೆ. ಹಾಗಾಗಿ ಆಸ್ಟ್ರೇಲಿಯಾ ಆಟಗಾರರು ನಿರ್ಬಂಧ ಮುಗಿಯುವವರೆಗೆ ಕಾಯಬೇಕಿದೆ.