alex Certify ಐಪಿಎಲ್​​ ಹರಾಜು ಪ್ರಕ್ರಿಯೆಗೆ ಆಟಗಾರರ ಲಿಸ್ಟ್​ ಔಟ್​..! ಸಚಿನ್​ ಪುತ್ರ ಅರ್ಜುನ್​ಗೂ ಸ್ಥಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಲ್​​ ಹರಾಜು ಪ್ರಕ್ರಿಯೆಗೆ ಆಟಗಾರರ ಲಿಸ್ಟ್​ ಔಟ್​..! ಸಚಿನ್​ ಪುತ್ರ ಅರ್ಜುನ್​ಗೂ ಸ್ಥಾನ

ಫೆಬ್ರುವರಿ 18ರಂದು ಚೆನ್ನೈನಲ್ಲಿ ನಡೆಯಲಿರುವ ಐಪಿಎಲ್​ ಕಿರು ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 1114 ಆಟಗಾರರು ತಮ್ಮ ಹೆಸರನ್ನ ನೋಂದಾಯಿಸಿಕೊಂಡಿದ್ದರು. ಈ ಪೈಕಿ 8 ಫ್ರಾಂಚೈಸಿಗಳು 292 ಆಟಗಾರರನ್ನ ಆಯ್ಕೆ ಮಾಡಿದೆ. ಮುಂದಿನ ಗುರುವಾರ ಈ ಹರಾಜು ಪ್ರಕ್ರಿಯೆ ನಡೆಯಲಿದೆ.

ಟೀಂ ಇಂಡಿಯಾ ಮಾಜಿ ಆಟಗಾರ ಹಾಗೂ ಆಫ್​​ ಸ್ಪಿನರ್​ ಹರ್ಭಜನ್​ ಸಿಂಗ್​ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​​ ಕೇದಾರ್​ ಜಾಧವ್​​, ಆಸ್ಟ್ರೇಲಿಯಾದ ಸ್ಟೀವ್​ ಸ್ಮಿತ್​, ಗ್ಲೆನ್​ ಮ್ಯಾಕ್ಸ್​ವೆಲ್​​ 2 ಕೋಟಿ ಮೌಲ್ಯದ ಕ್ಯಾಟಗರಿಯಲ್ಲಿ ಸ್ಥಾನ ಪಡೆದಿದ್ದಾರೆ.

2021ನೇ ಐಪಿಎಲ್​ ಆವೃತ್ತಿಗೆ 292 ಆಟಗಾರರ ಲಿಸ್ಟ್ ಹೊರಬಿದ್ದಿದ್ದು ಚೆನ್ನೈನಲ್ಲಿ ಫೆಬ್ರವರಿ 18ರಂದು ಹರಾಜು ಪ್ರಕ್ರಿಯೆ ನಡೆಯಲಿದೆ. ಒಟ್ಟು 164 ಭಾರತೀಯ ಆಟಗಾರರು ಹಾಗೂ 125 ವಿದೇಶಿ ಆಟಗಾರರು ಮತ್ತು ಅಸೋಸಿಯೇಟ್​ ರಾಷ್ಟ್ರಗಳ ಮೂವರು ಆಟಗಾರರನ್ನ ಹರಾಜು ಪ್ರಕ್ರಿಯೆಯಲ್ಲಿ ಸೇರಿಸಿಕೊಳ್ಳಲಾಗಿದೆ.

1.5 ಕೋಟಿ ಮೌಲ್ಯದ ವಿಭಾಗದಲ್ಲಿ 12 ಆಟಗಾರರು ಸ್ಥಾನ ಪಡೆದಿದ್ದಾರೆ. ಹನುಮ ವಿಹಾರಿ ಹಾಗೂ ಉಮೇಶ್​ ಯಾದವ್​​ 1 ಕೋಟಿ ಮೌಲ್ಯದ ವಿಭಾಗದ 11 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ರಾಯಲ್​ ಚಾಲೆಂಜರ್ಸ್​ ಈ ಬಾರಿ ಅತಿ ಹೆಚ್ಚು ಅಂದ್ರೆ 13 ಆಟಗಾರರನ್ನ ಹರಾಜು ಪ್ರಕ್ರಿಯೆ ಮೂಲಕ ಪಡೆಯಲಿದೆ. ಸನ್​ರೈಸರ್ಸ್ ತಂಡದಲ್ಲಿ ಕೇವಲ ಮೂರು ಸ್ಥಾನ ಮಾತ್ರ ಬಾಕಿ ಇದೆ. ಕಿಂಗ್ಸ್​ ಇಲೆವನ್​ ಪಂಜಾಬ್​ ಅತಿ ಹೆಚ್ಚು ಮೌಲ್ಯ ಅಂದರೆ 53.1 ಕೋಟಿ ರೂಪಾಯಿ ಹರಾಜಿನಲ್ಲಿ ಸಾಗಿದ್ರೆ ಸನ್​ರೈಸರ್ಸ್​ ತಂಡ 10.75 ಕೋಟಿಯಲ್ಲಿದೆ. ಚೆನ್ನೈ ಸೂಪರ್​​ ಕಿಂಗ್ಸ್​ನಲ್ಲಿ 7 ಸ್ಥಾನಗಳು ಖಾಲಿ ಇವೆ.

ಈ ಬಾರಿಯ ಐಪಿಎಲ್​ ಹರಾಜು ಪ್ರಕಿಯೆಯಲ್ಲಿ ಸಚಿನ್​ ತೆಂಡೂಲ್ಕರ್​ ಪುತ್ರ ಎಡಗೈ ವೇಗಿ ಅರ್ಜುನ್​ ತೆಂಡೂಲ್ಕರ್​​ ಆಲ್​​ರೌಂಡರ್​​ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅರ್ಜುನ್​ ತೆಂಡೂಲ್ಕರ್​ ಅತಿ ಕಡಿಮೆ ಅಂದರೆ 20 ಲಕ್ಷ ರೂಪಾಯಿ ವಿಭಾಗದ ಹರಾಜು ಪ್ರಕ್ರಿಯೆಯ ಆಟಗಾರರ ಪಟ್ಟಿಯಲ್ಲಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...