ಐಪಿಎಲ್ 14ನೇ ಸರಣಿಯ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ತಂಡವನ್ನು 2 ವಿಕೆಟ್‌ಗಳಿಂದ ಸೋಲಿಸಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ಆಟಗಾರರಾದ ಹರ್ಷಲ್ ಪಟೇಲ್, ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ಕೈಲ್ ಜೇಮ್ಸನ್ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆಸಿದ್ದಾರೆ.
ಹರ್ಷಲ್ ಪಟೇಲ್, ಐಪಿಎಲ್ ನ ಮೊದಲ ಪಂದ್ಯದಲ್ಲಿಯೇ 5 ವಿಕೆಟ್ ಪಡೆದ ಹರ್ಷಲ್ ಗಮನ ಸೆಳೆದಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಐದು ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೂ ಪಟೇಲ್ ಪಾತ್ರರಾಗಿದ್ದಾರೆ.
ಹಿಂದಿನ ಋತುವಿನಲ್ಲಿ ಫ್ಲಾಪ್ ಆಗಿದ್ದ ಮ್ಯಾಕ್ಸ್ ವೆಲ್ ರನ್ನು ಈ ಬಾರಿ ಆರ್ ಸಿ ಬಿ ತಂಡ 14.25 ಕೋಟಿಗೆ ಖರೀದಿ ಮಾಡಿತ್ತು. ಮೊದಲ ಪಂದ್ಯದಲ್ಲಿಯೇ ಕೊಹ್ಲಿಯನ್ನು ಮ್ಯಾಕ್ಸ್ ವೆಲ್ ನಿರಾಶೆ ಮಾಡಿಲ್ಲ. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿದ ಮ್ಯಾಕ್ಸ್ ವೆಲ್ 28 ಎಸೆತಗಳಲ್ಲಿ 39 ರನ್ ಬಾರಿಸಿದ್ರು. ಮೂರು ಬೌಂಡರಿ ಹಾಗೂ ಎರಡು ಸಿಕ್ಸ್ ಬಾರಿಸಿದ ಮ್ಯಾಕ್ಸ್ ವೆಲ್, 46 ರನ್ ಗೆ ಎರಡು ವಿಕೆಟ್ ಕಳೆದುಕೊಂಡಿದ್ದ ಆರ್ ಸಿ ಬಿಗೆ ನೆರವಾದ್ರು.
ನ್ಯೂಜಿಲೆಂಡ್ ವೇಗದ ಬೌಲರ್ ಕೈಲ್ ಜೇಮ್ಸನ್ ಕೂಡ ಮೊದಲ ಪಂದ್ಯದಲ್ಲಿಯೇ ಛಾಪು ಮೂಡಿಸಿದ್ದಾರೆ. ಆರ್‌ಸಿಬಿ ಕೈಲ್ ರನ್ನು 15 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಮೊದಲ ಪಂದ್ಯದಲ್ಲಿ ಜೇಮ್ಸನ್ ನಾಲ್ಕು ಓವರ್‌ಗೆ 27 ರನ್ ನೀಡಿ, ಒಂದ ವಿಕೆಟ್ ಕಬಳಿಸಿದ್ರು.