ಫೆಬ್ರವರಿ 18 ರಂದು ಚೆನ್ನೈನಲ್ಲಿ 2021 ರ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕಿಂತ ಒಂದು ದಿನ ಮೊದಲೇ ಪಂಜಾಬ್ ತಂಡ ಮಹತ್ವದ ನಿರ್ಧಾರ ಪ್ರಕಟಿಸಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ಅನ್ನು ಪಂಜಾಬ್ ಕಿಂಗ್ಸ್ ಎಂದು ಅಧಿಕೃತವಾಗಿ ಮರು ನಾಮಕರಣ ಮಾಡಲಾಗಿದ್ದು, ಹೊಸ ಲೋಗೋವನ್ನು ಫ್ರಾಂಚೈಸ್ ಅನಾವರಣಗೊಳಿಸಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಇನ್ನು ಮುಂದೆ ಪಂಜಾಬ್ ಕಿಂಗ್ಸ್ ಆಗಿ ಮುಂದುವರೆಯಲಿದೆ. 2008ರಲ್ಲಿ ಐಪಿಎಲ್ ಉದ್ಘಾಟನಾ ಆವೃತ್ತಿಯ ನಂತರದಲ್ಲಿ ನೆಸ್ ವಾಡಿಯಾ, ಪ್ರೀತಿ ಜಿಂಟಾ, ಕರಣ್ ಪಾಲ್, ಮೋಹಿತ್ ಬರ್ಮನ್ ಅವರ ಜಂಟಿ ಒಡೆತನದ ಪ್ರಾಂಚೈಸಿ ಇನ್ನೂ ಐಪಿಎಲ್ ಪ್ರಶಸ್ತಿ ಗೆದ್ದಿಲ್ಲ.
ಹದಿಮೂರು ವರ್ಷಗಳ ಇತಿಹಾಸದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಒಮ್ಮೆ 2014 ರಲ್ಲಿ ರನ್ನರ್ ಅಪ್, 2008 ರಲ್ಲಿ ಮೂರನೇ ಸ್ಥಾನ ಗಳಿಸಿತ್ತು. ಕಳೆದ ವರ್ಷ ಯುಎಇನಲ್ಲಿ ನಡೆದ ಆವೃತ್ತಿಯಲ್ಲಿ ಆರನೇ ಸ್ಥಾನ ಪಡೆದಿತ್ತು.