ಭಾನುವಾರ ನಡೆದ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಪಂದ್ಯದ ವೇಳೆ ಹುಡುಗಿಯೊಬ್ಬಳು ಗಮನ ಸೆಳೆದಿದ್ದಾರೆ. ಕಿತ್ತಳೆ ಬಣ್ಣದ ಟೀ ಶರ್ಟ್ ಧರಿಸಿದ್ದ ಹುಡುಗಿ ಎಸ್‌ಆರ್‌ಹೆಚ್ ಗೆ ಬೆಂಬಲ ನೀಡ್ತಿದ್ದರು. ಆಗಾಗ ಕ್ಯಾಮರಾ ಕಣ್ಣು ಅವರನ್ನು ಸೆರೆ ಹಿಡಿದಿದೆ. ಟಿವಿ ಪರದೆ ಮೇಲೆ ಕಾಣಿಸಿಕೊಂಡಿದ್ದ ಹುಡುಗಿ ಯಾರು ಎಂಬ ಕುತೂಹಲ ಕೆಲ ಅಭಿಮಾನಿಗಳಿಗಿದೆ.
ಸನ್‌ರೈಸರ್ಸ್ ಹೈದರಾಬಾದ್ ಗೆ ಬೆಂಬಲ ನೀಡ್ತಿದ್ದ ಈ ಹುಡುಗಿ ಹೆಸರು ಕವಿಯಾ ಮಾರನ್. ಕವಿಯಾ, ಎಸ್‌ಆರ್‌ಹೆಚ್‌ನ ಸಿಇಒ. ಐಪಿಎಲ್ 2021 ರ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಬಿಡ್ಡಿಂಗ್ ಮಾಡುವಾಗ ಕವಿಯಾ ಕಾಣಿಸಿಕೊಂಡಿದ್ದರು. ಕವಿಯಾ ಗೆ ಕ್ರಿಕೆಟ್ ಇಷ್ಟ. ಮೊದಲ ಬಾರಿ ಐಪಿಎಲ್ 2018 ರ ಸಮಯದಲ್ಲಿ ಕಾಣಿಸಿಕೊಂಡಿದ್ದರು. ಕವಿಯಾ ಎಂಬಿಎ ಮುಗಿಸಿದ್ದಾರೆ. ತಂದೆ ಬ್ಯುಸಿನೆಸ್ ಗೆ ನೆರವಾಗಬೇಕೆಂಬ ಕಾರಣಕ್ಕೆ ಕವಿಯಾ ಎಂಬಿಎ ಮಾಡಿದ್ದರು.
ಕವಿಯಾ ಮಾರನ್, ಸನ್ ಗ್ರೂಪ್ ಮಾಲೀಕ ಕಲಾನಿಧಿ ಮಾರನ್ ಅವರ ಪುತ್ರಿ. ಕವಿಯಾ ತಂದೆ ಕಲಾನಿಧಿ, ಸನ್ ಗ್ರೂಪ್ ಮಾಲೀಕರು. 28 ವರ್ಷದ ಕವಿಯಾ ಮಾರನ್ ಸ್ವತಃ ಸನ್ ಮ್ಯೂಸಿಕ್‌ನೊಂದಿಗೆ ಸಂಬಂಧ ಹೊಂದಿದ್ದಾರೆ. ನಿನ್ನೆ ನಡೆದ ಐಪಿಎಲ್ ಪಂದ್ಯದ ನಂತ್ರ ಸಾಮಾಜಿಕ ಜಾಲತಾಣದಲ್ಲಿ ಕವಿಯಾ ಮಾರನ್ ಫೋಟೋ ಹರಿದಾಡ್ತಿದೆ.