ಭಾನುವಾರ ಸನ್ ರೈಸರ್ಸ್ ಹೈದ್ರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮಧ್ಯೆ ನಡೆದ ಪಂದ್ಯದಲ್ಲಿ ಹರ್ಭಜನ್ ಸಿಂಗ್ ಮೈದಾನಕ್ಕಿಳಿದಿದ್ದರು. ಕೋಲ್ಕತ್ತಾದ 11 ಆಟಗಾರರಲ್ಲಿ ಒಬ್ಬರಾಗಿದ್ದ ಹರ್ಭಜನ್ ಗೆ ಕೇವಲ ಒಂದು ಓವರ್ ಬೌಲಿಂಗ್ ಸಿಕ್ಕಿತ್ತು. ಎರಡು ವರ್ಷಗಳ ನಂತ್ರ ಮೈದಾನಕ್ಕಿಳಿದ ಹರ್ಭಜನ್ ಸಿಂಗ್ ಗೆ ಕೋಲ್ಕತ್ತಾ ನಾಯಕ ಇಯೋನ್ ಮೊರ್ಗನ್ ಒಂದು ಓವರ್ ನೀಡಿರುವುದು ಅಭಿಮಾನಿಗಳಲ್ಲಿ ಅಚ್ಚರಿಗೆ ಕಾರಣವಾಗಿದೆ.
ಮೊರ್ಗನ್, ಹರ್ಭಜನ್ ಸಿಂಗ್ ಗೆ ಕೇವಲ ಒಂದು ಓವರ್ ನೀಡಿದ್ದೇಕೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಎರಡು ವರ್ಷಗಳ ನಂತ್ರ ಮೈದಾನಕ್ಕಿಳಿದ್ರೂ ಹರ್ಭಜನ್ ಸಿಂಗ್ ಬೌಲಿಂಗ್ ಶೈಲಿ ಬದಲಾಗಿಲ್ಲ.
ಕೋಲ್ಕತಾ ನೈಟ್ ರೈಡರ್ಸ್ ಪರ ಹರ್ಭಜನ್ ಸಿಂಗ್ ಗೆ ಮೊದಲ ಓವರ್ ನೀಡಲಾಗಿತ್ತು. ಹರ್ಭಜನ್ ಸಿಂಗ್ ಓವರ್‌ನಲ್ಲಿ 7 ರನ್ ನೀಡಿದ್ದರು. ಮೊದಲ ಎರಡು ಎಸೆತಗಳಲ್ಲಿ ರಿದ್ಧಿಮಾನ್ ಸಾಹಾಗೆ ರನ್ ಗಳಿಸಲು ಸಾಧ್ಯವಾಗಲಿಲ್ಲ. ಮೂರನೇ ಎಸೆತದಲ್ಲಿ ಸಹಾ ಒಂದು ರನ್ ಗಳಿಸುವಲ್ಲಿ ಯಶಸ್ವಿಯಾದರು. ನಾಲ್ಕು ಮತ್ತು ಐದನೇ ಎಸೆತದಲ್ಲಿ ಡೇವಿಡ್ ವಾರ್ನರ್ ಗೆ ಯಾವುದೇ ರನ್ ಗಳಿಸಲು ಸಾಧ್ಯವಾಗಲಿಲ್ಲ. ಆದ್ರೆ ಆರನೇ ಬೌಲಿಗೆ ಸಿಕ್ಸ್ ಬಾರಿಸಿದ್ರು. ಇದಾದ ನಂತ್ರ ಹರ್ಭಜನ್ ಗೆ ಯಾವುದೇ ಓವರ್ ಸಿಗಲಿಲ್ಲ. ಈ ಋತುವಿನಲ್ಲಿ ಬಜ್ಜಿಯನ್ನು ಕೋಲ್ಕತ್ತಾ ನೈಟ್ ರೈಡರ್ಸ್ 2 ಲಕ್ಷ ರೂಪಾಯಿ ಬೇಸ್ ಪಾಯಿಂಟ್ ಗೆ ಖರೀದಿ ಮಾಡಿದೆ.