alex Certify ಐಪಿಎಲ್ 2021: ಈ ನಗರಗಳಲ್ಲಿ ನಡೆಯಲ್ಲ ಐಪಿಎಲ್ ಪಂದ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಲ್ 2021: ಈ ನಗರಗಳಲ್ಲಿ ನಡೆಯಲ್ಲ ಐಪಿಎಲ್ ಪಂದ್ಯ

ಇಂಡಿಯನ್ ಪ್ರೀಮಿಯರ್ ಲೀಗ್ ಗೆ ತಯಾರಿ ಜೋರಾಗಿ ನಡೆದಿದೆ. ಏಪ್ರಿಲ್ 9 ರಿಂದ ಮೇ 30 ರವರೆಗೆ ಐಪಿಎಲ್ ಪಂದ್ಯಗಳು ನಡೆಯಲಿದೆ. ಈ ಬಾರಿ ಇಂದೋರ್‌, ರಾಜಸ್ಥಾನ, ಮೊಹಾಲಿಯಲ್ಲಿ ಐಪಿಎಲ್ ಪಂದ್ಯಗಳು ನಡೆಯುವುದಿಲ್ಲ. ಕೇವಲ ಆರು ನಗರಗಳಲ್ಲಿ ಪಂದ್ಯಗಳು ನಡೆಯಲಿವೆ.

ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಐಪಿಎಲ್ ನ ಪಂದ್ಯಗಳು ನಡೆಯಲಿವೆ. ಐಪಿಎಲ್‌ನ ಮೊದಲ ಪಂದ್ಯ ಏಪ್ರಿಲ್ 9 ರಂದು ಚೆನ್ನೈನಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಐಪಿಎಲ್ ವೇಳಾಪಟ್ಟಿಯನ್ನು ಕೆಲವು ದಿನಗಳ ಹಿಂದೆ ಘೋಷಿಸಲಾಗಿದೆ.

ಈ ಬಾರಿ ಐಪಿಎಲ್ ಸಮಯ ಬದಲಾಗಿದೆ. ಶನಿವಾರ ಮತ್ತು ಭಾನುವಾರ ಮಾತ್ರವಲ್ಲ ಬುಧವಾರ, ಗುರುವಾರ ಮತ್ತು ಶುಕ್ರವಾರವೂ ಎರಡು ಪಂದ್ಯಗಳು ನಡೆಯಲಿವೆ. ಐಪಿಎಲ್ ಪಂದ್ಯಗಳು 3 ಗಂಟೆ 30 ನಿಮಿಷಕ್ಕೆ ಮತ್ತು 7 ಗಂಟೆ 30 ನಿಮಿಷಕ್ಕೆ ಪ್ರಾರಂಭವಾಗಲಿದೆ. ಕೊರೊನಾ ಮಧ್ಯೆ ಐಪಿಎಲ್ ಪಂದ್ಯಗಳು ನಡೆಯುತ್ತಿದ್ದು, ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...