ದುಬೈ: ಐಪಿಎಲ್ 14ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 27 ರನ್ ಜಯಗಳಿಸಿದ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿದೆ. ಚೆನ್ನೈ ತಂಡ ನಾಲ್ಕನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿದ್ದು, ಕೆಕೆಆರ್ ಗೆ ಮೂರನೇ ಪ್ರಶಸ್ತಿಯ ಕನಸು ಭಗ್ನವಾಗಿದೆ.
2010, 2011, 2018 ಮತ್ತು 2021ರಲ್ಲಿ ಚೆನ್ನೈ ತಂಡ ಐಪಿಎಲ್ ಚಾಂಪಿಯನ್ ಆಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ 20 ಓವರುಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತ್ತು. ಗಾಯಕವಾಡ್ 32, ಡುಪ್ಲೆಸಿಸ್ 86, ರಾಬಿನ್ ಉತ್ತಪ್ಪ 31, ಮೋಹಿನ್ 37 ರನ್ ಗಳಿಸಿದರು.
ಗೆಲುವಿನ ಗುರಿ ಬೆನ್ನತ್ತಿದ ಕೊಲ್ಕತ್ತಾ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 165 ರನ್ ಗಳಿಸಲಷ್ಟೇ ಶಕ್ತವಾಯಿತು. ಚಾಂಪಿಯನ್ ಆದ ಚೆನ್ನೈ ತಂಡಕ್ಕೆ 20 ಕೋಟಿ ರೂ. ಹಾಗೂ ರನ್ನರ್-ಅಪ್ ಕೆಕೆಆರ್ 12.5 ಕೋಟಿ ಪ್ರಶಸ್ತಿ ಮೊತ್ತ ದೊರೆಯಲಿದೆ.