
ಐಪಿಎಲ್ 2021ಕ್ಕೆ ದಿನಗಣನೆ ಶುರುವಾಗಿದೆ. ಎಲ್ಲ ತಂಡಗಳ ಆಟಗಾರರು ಐಪಿಎಲ್ ಗಾಗಿ ಭರ್ಜರಿ ತಯಾರಿ ನಡೆಸಿದ್ದಾರೆ. ದೆಹಲಿ ಕ್ಯಾಪಿಟಲ್ಸ್ನ ವೇಗದ ಬೌಲರ್ ಅವೇಶ್ ಖಾನ್ ಐಪಿಎಲ್ ಗಾಗಿ ಭರ್ಜರಿ ತಯಾರಿ ನಡೆಸಿದ್ದಾರೆ. ದೆಹಲಿ ಕ್ಯಾಪಿಟಲ್ಸ್ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ವೀಡಿಯೊ ಒಂದನ್ನು ಪೋಸ್ಟ್ ಮಾಡಿದೆ.
ವಿಡಿಯೋದಲ್ಲಿ ತಂಡದ ಸ್ಪಿನ್ ಬೌಲರ್ ಅಮಿತ್ ಮಿಶ್ರಾ, ಅವೇಶ್ ಖಾನ್ ಬಿರಿಯಾನಿ ಮಿಸ್ ಮಾಡಿಕೊಳ್ತಿದ್ದಾರೆಂದು ಹೇಳ್ತಾರೆ. 2-2 ಕೆ.ಜಿ. ಬಿರಿಯಾನಿ ತಿನ್ನುತ್ತಿದ್ದ ಆಟಗಾರ ಈಗ ಇದನ್ನು ಬಿಟ್ಟಿದ್ದು, ಅದ್ರ ರಿಸಲ್ಟ್ ಈಗ ಕಾಣ್ತಿದೆ ಎನ್ನುತ್ತಾರೆ.
ಇದಕ್ಕೆ ಅವೇಶ್ ಖಾನ್ ಹೀಗೆ ಪ್ರತಿಕ್ರಿಯೆ ನೀಡುತ್ತಾರೆ. ಬಾಲ್ಯದಿಂದಲೂ ಬಿರಿಯಾನಿ ತಿನ್ನುತ್ತ ಬಂದಿದ್ದೇನೆ. ಈಗ ಬಿರಿಯಾನಿ ಬಿಟ್ಟಿದ್ದು, ಈಗ ಲೈಟ್ ಫೀಲ್ ಮಾಡ್ತಿದ್ದೇನೆ. ಯಾವುದಕ್ಕೆ ನೀವು ಕಷ್ಟಪಡ್ತಿರೋ ಅದ್ರ ಫಲಿತಾಂಶ ನಿಮಗೆ ಸಿಕ್ಕಿದ್ರೆ ನಿಮಗೆ ಅದು ಖುಷಿ ನೀಡುತ್ತದೆ ಎಂದು ಅವೇಶ್ ಖಾನ್ ಹೇಳಿದ್ದಾರೆ. ಅವೇಶ್ ಖಾನ್ 2018ರಿಂದ ದೆಹಲಿ ತಂಡದಲ್ಲಿ ಆಡ್ತಿದ್ದಾರೆ.