ಐಪಿಎಲ್ ಹಬ್ಬ ಇದೇ ಏಪ್ರಿಲ್ 9ರಿಂದ ಶುರುವಾಗ್ತಿದೆ. ಐಪಿಎಲ್ ಪಂದ್ಯಕ್ಕೂ ಮುನ್ನ ದೆಹಲಿ ಕ್ಯಾಪಿಟಲ್ಸ್ ತಂಡದಲ್ಲಿ ಟೆನ್ಷನ್ ಹೆಚ್ಚಾಗಿದೆ. ತಂಡಕ್ಕೆ ಬಿಗ್ ಶಾಕ್ ಸಿಕ್ಕಿದೆ. ತಂಡದ ಅತ್ಯುತ್ತಮ ಸ್ಪಿನ್ನರ್ ಅಕ್ಷರ್ ಪಟೇಲ್ ಕೊರೊನಾ ಪಾಸಿಟಿವ್ ಆಗಿದ್ದಾರೆ.
ಅಕ್ಷರ್ ಪಟೇಲ್ ಗೆ ಕೊರೊನಾ ಕಾಣಿಸಿಕೊಂಡಿದೆ ಎಂದು ದೆಹಲಿ ತಂಡ ಹೇಳಿಕೆ ನೀಡಿದೆ. ಅವರು ಕೊರೊನಾ ಮಾರ್ಗಸೂಚಿಯನ್ನು ಅನುಸರಿಸುತ್ತಿದ್ದು, ಐಸೊಲೇಷನ್ ನಲ್ಲಿದ್ದಾರೆ. ಏಪ್ರಿಲ್ 10ರಂದು ದೆಹಲಿ ತಂಡದ ಮೊದಲ ಪಂದ್ಯ ನಡೆಯಲಿದೆ. ಆದ್ರೆ ಕೊರೊನಾ ಕಾರಣದಿಂದಾಗಿ ಅಕ್ಷರ್ ತಂಡದಿಂದ ಹೊರಗುಳಿಯಲಿದ್ದಾರೆ.
ಇದಕ್ಕೂ ಮುನ್ನ ಕೆಕೆಆರ್ ನ ನಿತೀಶ್ ರಾಣೆಗೆ ಕೊರೊನಾ ಕಾಣಿಸಿಕೊಂಡಿತ್ತು. ಆದ್ರೆ ಈಗವರು ಆರೋಗ್ಯವಾಗಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನ 8 ಸಿಬ್ಬಂದಿಗೂ ಕೊರೊನಾ ಕಾಣಿಸಿಕೊಂಡಿದೆ. ಕೊರೊನಾ ಐಪಿಎಲ್ ಗೆ ಮುಳ್ಳಾಗುವ ಸಾಧ್ಯತೆ ಹೆಚ್ಚಿದೆ.