ಐಪಿಎಲ್ ಆರ್.ಸಿ.ಬಿ. ತಂಡದಲ್ಲಿರುವ ಆಸ್ಟ್ರೇಲಿಯಾದ ಕೇನ್ ರಿಚರ್ಡ್ ಸನ್ ತಂದೆಯಾಗುವ ಖುಷಿಯಲ್ಲಿದ್ದಾರೆ. ಹಾಗಾಗಿ ಅವರು ಪಂದ್ಯಕ್ಕೆ ಬರುವುದಿಲ್ಲ ಎಂದು ಹೇಳಲಾಗಿದೆ. ಇವರ ಬದಲು ಆಸ್ಟ್ರೇಲಿಯಾದ ಸ್ಪಿನ್ನರ್ ಆ್ಯಡಂ ಝಂಪಾ ಆರ್.ಸಿ.ಬಿ. ತಂಡ ಸೇರಿದ್ದಾರೆ. ಸ್ಪಿನ್ನರ್ ಗಳಿಂದ ಆರ್ಸಿಬಿ ತಂಡದ ಸಾಮರ್ಥ್ಯ ಹೆಚ್ಚಾಗುತ್ತಾ ನೋಡಬೇಕಾಗಿದೆ.
ಆ್ಯಡಂ ಝಂಪಾ ಅವರನ್ನು ಆರ್.ಸಿ.ಬಿ. ಜೆರ್ಸಿಯಲ್ಲಿ ಸ್ವಾಗತಿಸಲು ನಾವು ರೋಮಾಂಚನಗೊಂಡಿದ್ದೇವೆ. ಅವರು ಕೇನ್ ರಿಚರ್ಡ್ ಸನ್ ಸ್ಥಾನವನ್ನು ತುಂಬಲಿದ್ದಾರೆ.
ಕೇನ್ ರಿಚರ್ಡ್ಸನ್ ಮತ್ತು ಅವರ ಪತ್ನಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅವರು ಪಂದ್ಯದಿಂದ ಹೊರ ಬಂದಿರುವ ನಿರ್ಧಾರವನ್ನು ತಂಡ ಗೌರವಿಸುತ್ತದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದೆ.